ADVERTISEMENT

‘ಲಾಭದಲ್ಲಿ ರೈತ ಸೇವಾ ಸಹಕಾರ ಸಂಘ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:42 IST
Last Updated 24 ಸೆಪ್ಟೆಂಬರ್ 2013, 6:42 IST

ಜಾಲಹಳ್ಳಿ: ರೈತರು ಕೇವಲ ಬೆಳೆ ಸಾಲ ಮಾತ್ರ ಪಡೆಯದೆ ಸಂಘದಲ್ಲಿ ರೈತರಿಗೆ ಸಿಗುವ ಆನೇಕ  ಸೌಲಭ್ಯಗಳನ್ನು ಸಹ ಪಡೆಯಬೇಕು ಎಂದು ಸ್ಥಳೀಯ ಪ್ರಾಥಮಿಕ ರೈತ ಸೇವಾ ಸಹಕಾರ ಸಂಘದ ವ್ಯವಸ್ಥಾಪಕ ವೀರಭದ್ರಪ್ಪ ಚಿಂಚರಕಿ ಹೇಳಿದರು.
 
ಸೋಮವಾರ ಸ್ಥಳೀಯ ಪ್ರಾಥಮಿಕ ರೈತ ಸೇವಾ ಸಹಕಾರ ಸಂಘದ ಅವರಣದಲ್ಲಿ ಹಮ್ಮಿಕೊಂಡ ಸಂಘದ 2012-13ನೇ ಸಾಲಿನ ವಾರ್ಷಿಕ  ಸಭೆಯ ವರದಿ ಮಂಡಿಸಿ, ಸಂಘಕ್ಕೆ ಸುಮಾರು 20 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಕೆಲವು ವರ್ಷಗಳ ಹಿಂದೆ ತುಂಬಾ ನಷ್ಟದಲ್ಲಿದ್ದ ಸಂಘವು ಅಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಇಂದು ಲಾಭದ ಹಂತಕ್ಕೆ ತಲುಪಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುದರಂಗಪ್ಪ ಯರಕಮಟ್ಟಿ, ನಿರ್ದೇಶಕರಾದ ಕೆ.ಎಸ್ ನಾಡಗೌಡ, ಮುದ್ದಪ್ಪ ಬಂಡಿ, ಈರಣ್ಣ ಬಳೆ, ಅಲಿಬಾಬಾ ಗಲಗ, ಮಾನಪ್ಪ ಹೆಚ್. ಸಿದ್ದಾಪೂರು ಸೇರಿದಂತೆ ಪಟ್ಟಣದ ಮುಖಂಡರಾದ ಬಸವರಾಜ ದೊಡ್ಡಳ್ಳಿ, ಮೈನುದ್ದೀನ್ ಜಕಾತಿ, ಶಶಿಕಾಂತ ಪಾಟೀಲ್, ಚಂದ್ರಶೇಖರ್ ಹೆಚ್ ಸಿದ್ದಾಪೂರು, ಖರ್ಷಿದ್ ಪಾಟೀಲ್ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.