ADVERTISEMENT

ಚಿರತೆ ಹಿಡಿಯಲು ಹರಸಾಹಸ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 10:37 IST
Last Updated 1 ನವೆಂಬರ್ 2019, 10:37 IST
ಮುದಗಲ್ ಸಮೀಪದ ಆಮದಿಹಾಳ ಗ್ರಾಮದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ ಆಗಿರುವುದು
ಮುದಗಲ್ ಸಮೀಪದ ಆಮದಿಹಾಳ ಗ್ರಾಮದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ ಆಗಿರುವುದು   

ಮುದಗಲ್: ಸಮೀಪದ ಆದಾಪುರು ಮತ್ತು ಆಮದಿಹಾಳ ಗ್ರಾಮದ ಪ್ರದೇಶದಲ್ಲಿ ಚಿರತೆ ಪತ್ಯಕ್ಷವಾಗಿದ್ದು, ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಆದಾಪುರು ಗ್ರಾಮದಲ್ಲಿ 4 ದಿನಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿದ್ದು, ಲಿಂಗಸುಗೂರು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಬೋನ್‌ ಇಟ್ಟಿದ್ದಾರೆ. ಆದರೆ ಚಿರತೆ ಮಾತ್ರ ಸಿಕ್ಕಿಲ್ಲ.

ಗುರುವಾರ ಆಮದಿಹಾಳ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಆಮದಿಹಾಳ ಮತ್ತು ಆದಾಪೂರು ಗ್ರಾಮದ ಜನರು ಜಮೀನಿಗೆ ಹೋಗಲು ಮತ್ತು ಕುರಿ ಕಾಯಲು ಹೋಗಲು ಭಯ ಪಡುತ್ತಿದ್ದಾರೆ. ಆದಾಪುರು ಗ್ರಾಮದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ ಆಗಿವೆ. ಚಿರತೆ ದಾಳಿಗೆ ಆದಾಪುರು ಗ್ರಾಮದಲ್ಲಿ ಒಂದು ಮೇಕೆ ಬಲಿಗಾಗಿದೆ.

ADVERTISEMENT

ಮುದಗಲ್ ಸುತ್ತಮುತ್ತ ಹಳ್ಳಿಗಳಾದ ಹುನೂರು, ಮಾಕಾಪುರು, ಕನಸಾವಿ, ಕೋಮಲಾಪುರು, ಯರದಿಹಾಳ ಸೇರಿದಂತೆ ಅನೇಕ ಹಳ್ಳಿಗಳ ಜನರು ಪ್ರಾಣ ಭಯದಿಂದ ಜಮೀನುಗಳಿಗೆ ಮತ್ತು ಕುರಿ ಆಡು ಕಾಯಲು ಹೋಗಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ.
ಸುತ್ತಾ ಗಣಿಗಾರಿಕೆ ಪ್ರದೇಶ ಇರುವುದರಿಂದ ಚಿರತೆ ಹಿಡಿಯಲು ಸಾಧ್ಯವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.