ADVERTISEMENT

ಬಿಜಿಡಿ-103 ಕಡಲೆ ತಳಿ: ಅಧಿಕ ಇಳುವರಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 6:54 IST
Last Updated 28 ಜನವರಿ 2018, 6:54 IST
ರಾಯಚೂರು ತಾಲ್ಲೂಕಿನ ಮೀರಾಪುರದಲ್ಲಿ ಈಚೆಗೆ ಏರ್ಪಡಿಸಿದ್ದ ಬೀಜೋತ್ಪಾದನಾ ತರಬೇತಿ ಮತ್ತು ಕಡಲೆ ತಳಿ ಬಿಜಿಡಿ 103 ಕ್ಷೇತ್ರೋತ್ಸವದಲ್ಲಿ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು
ರಾಯಚೂರು ತಾಲ್ಲೂಕಿನ ಮೀರಾಪುರದಲ್ಲಿ ಈಚೆಗೆ ಏರ್ಪಡಿಸಿದ್ದ ಬೀಜೋತ್ಪಾದನಾ ತರಬೇತಿ ಮತ್ತು ಕಡಲೆ ತಳಿ ಬಿಜಿಡಿ 103 ಕ್ಷೇತ್ರೋತ್ಸವದಲ್ಲಿ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು   

ರಾಯಚೂರು: ಕಡಲೆ ತಳಿ ಬಿಜಿಡಿ 103 ದಪ್ಪ ಗಾತ್ರದ ದೇಶಿ ತಳಿಯಾಗಿದ್ದು, ಜೆಜಿ-11 ತಳಿಗಿಂತಲೂ ಅಧಿಕ ಇಳುವರಿ ಕೊಡುತ್ತದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೀಜ ವಿಭಾಗದ ವಿಶೇಷಾಧಿಕಾರಿ ಡಾ.ಬಸವೇಗೌಡ ಹೇಳಿದರು.

ತಾಲ್ಲೂಕಿನ ಮೀರಾಪುರ ಗ್ರಾಮದ ವಿದ್ಯಾ ಪ್ರಭು ಪಾಟೀಲ ಅವರ ಜಮೀನಿನಲ್ಲಿ ಈಚೆಗೆ ಏರ್ಪಡಿಸಿದ್ದ ಬೀಜೋತ್ಪಾದನಾ ತರಬೇತಿ ಮತ್ತು ಕಡಲೆ ತಳಿ ಬಿಜಿಡಿ 103 ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

ರೈತರು ಸಂಘಟಿತರಾಗುವ ಮೂಲಕ ವಿವಿಧ ಸವಲತ್ತುಗಳನ್ನು ಉಪಯೋಗಿಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಕಿರಿಯ ತಳಿ ತಜ್ಞ ಡಾ.ಲೊಕೇಶ್.ಜಿ.ವೈ., ರೈತ ಮುಖಂಡರಾದ ವಿಶ್ವನಾಥ ಸಾಹುಕಾರ, ಪ್ರಭುದೇವ ಪಾಟೀಲ, ಓಬಳೇಶ್, ಮೀರಾಪುರ, ಯಂಕಣ್ಣಗೌಡ ಮತ್ತು ಪಮ್ಮನಗೌಡ ಮಲ್ಲಪೂರು, ವೇಣಗೋಪಾಲ್, ಶುಶಾಂತ್ ಗೌಡ, ಎಚ್. ತಿಮ್ಮಪೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.