ADVERTISEMENT

ಕ್ಷಯ ರೋಗಿಗೆ 6 ತಿಂಗಳು ಉಚಿತ ಚಿಕಿತ್ಸೆ

ಸಕ್ರಿಯ ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನದಲ್ಲಿ ಜಿಲ್ಲಾ ಸಂಯೋಜಕ ಅಮರೇಶ ನಾಯಕ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 10:17 IST
Last Updated 12 ಡಿಸೆಂಬರ್ 2020, 10:17 IST
ಸಿರವಾರದಲ್ಲಿ ಶುಕ್ರವಾರ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಾಗೂ ತರಬೇತಿ ಕಾರ್ಯಕ್ರಮಕ್ಕೆ ಕ್ಷಯ ರೋಗ ಪತ್ತೆ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಅಮರೇಶ ನಾಯಕ ಚಾಲನೆ ನೀಡಿದರು
ಸಿರವಾರದಲ್ಲಿ ಶುಕ್ರವಾರ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಾಗೂ ತರಬೇತಿ ಕಾರ್ಯಕ್ರಮಕ್ಕೆ ಕ್ಷಯ ರೋಗ ಪತ್ತೆ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಅಮರೇಶ ನಾಯಕ ಚಾಲನೆ ನೀಡಿದರು   

ಸಿರವಾರ: ‘ಕ್ಷಯ ರೋಗ ಪತ್ತೆಯಾದ ವ್ಯಕ್ತಿಗೆ ಆರು ತಿಂಗಳು ಉಚಿತ ಚಿಕಿತ್ಸೆ ನೀಡಿ ರೋಗ ಗುಣಪಡಿಸಲಾಗುವುದು’ ಎಂದು ಕ್ಷಯ ರೋಗ ಪತ್ತೆ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಅಮರೇಶ ನಾಯಕ ಹೇಳಿದರು.

ಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಾಗೂ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವರ್ಷದಲ್ಲಿ ಎರಡು ಬಾರಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮ ಮಾಡುವ ಮೂಲಕ 2025ರ ವೇಳೆಗೆ ಕ್ಷಯರೋಗ ಮುಕ್ತ ರಾಜ್ಯ ಮತ್ತು ದೇಶ ಮಾಡುವ ಗುರಿ ಹೊಂದಿದ್ದು, ಅದನ್ನು ಪೂರ್ಣಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು.

ADVERTISEMENT

ಆಯುಷ್ ವೈದ್ಯಾಧಿಕಾರಿ ಸುನೀಲ್ ಸರೋದೆ ಮಾತನಾಡಿ,‘ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ಕಫ, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಬೆವರು ಬರುವುದು, ಹಸಿವು ಆಗದೆ ಇರುವುದು, ತೂಕ ಕಡಿಮೆ ಆಗುವ ಲಕ್ಷಣಗಳು ಕಂಡುಬರುವ ಪ್ರತಿಯೊಬ್ಬರೂ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪಿ.ಪಿ.ಎಂ.ಸಂಯೋಜಕ ಮೋಹಿನ ಪಾಷಾ, ಡಾ‌.ಪರಿಮಳ ಮೈತ್ರಿ, ಡಾ.ಪ್ರವೀಣ್ ಕುಮಾರ, ಡಾ.ಭಾರ್ಗವಿ ಜಾಗೀರದಾರ, ಡಾ.ಬಿ.ವಿ.ಸಿಂಗ್ ಹಾಗೂ ಕ್ಷಯರೋಗ ಮೇಲ್ವಿಚಾರಕ ಪ್ರೇಮ್ ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.