ಕವಿತಾಳ: ಸಮೀಪದ ಗುಡಿಹಾಳ ಗ್ರಾಮದ ಹತ್ತಿರ ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಕುಡಿಯಲು ಇಳಿದ ಗುಡಿಹಾಳ ಗ್ರಾಮದ ಯುವಕ ಯಮನೂರು ಬೂದೆಪ್ಪ ಯಾದವ (20) ಬುಧವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಕುರಿ ಮೇಯಿಸಲು ತೆರಳಿದ್ದ ಯುವಕ ಊಟ ಮಾಡಿದ ನಂತರ ನೀರು ಕುಡಿಯಲು ಕಾಲುವೆಗೆ ಇಳಿದಿದ್ದು ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ಥಳದಲ್ಲಿದ್ದ ಯುವಕನೊಬ್ಬ ನೋಡಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.