ADVERTISEMENT

ಎಸಿಬಿ ಅಧಿಕಾರಿಗಳಿಂದ ಭ್ರಷ್ಟಾಚಾರ ನಿಗ್ರಹ ಜಾಗೃತಿ

​ಪ್ರಜಾವಾಣಿ ವಾರ್ತೆ
Published 15 ಮೇ 2019, 13:13 IST
Last Updated 15 ಮೇ 2019, 13:13 IST

ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕಿನ ಉಪನೋಂದಣಾಧಿಕಾರಿಗಳ ಕಚೇರಿ, ತಹಸೀಲ್ದಾರ ಕಾರ್ಯಾಲಯ ಮತ್ತು ಪುರಸಭೆ ಕಾರ್ಯಾಲಯಕ್ಕೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ಉಪಾಧೀಕ್ಷಕ ಹರೀಶ ಜಿ., ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಬಿ. ಸಣಮನಿ ಮತ್ತು ಸಿಬ್ಬಂದಿ ಬುಧವಾರ ಭೇಟಿ ನೀಡಿ ಸಾರ್ವಜನಿಕರಿಗೆ ಕರ ಪತ್ರಗಳನ್ನು ಹಂಚುವುದರ ಮೂಲಕ ಭ್ರಷ್ಟಾಚಾರ ನಿಗ್ರಹ ದಳದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಸರ್ಕಾರಿ ನೌಕರರು ನ್ಯಾಯಯುತವಾಗಿ ಮಾಡಬೇಕಾದ ಸಾರ್ವಜನಿಕ ಕೆಲಸಕ್ಕಾಗಿ ಲಂಚ ನೀಡುವಂತೆ ಒತ್ತಾಯಿಸುವುದು, ಲಂಚ ಪಡೆಯುವುದು, ಲಂಚದ ರೂಪದಲ್ಲಿ ಇತರೆ ಆಮಿಷಗಳಿಗೆ ಒತ್ತಾಯಿಸುವುದು, ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಬೇರೆ ರೀತಿಯ ಅವ್ಯವಹಾರಗಳನ್ನು ನಡೆಸುವುದು ನಡೆಯುತ್ತಿದ್ದರೆ ಸಾರ್ವಜನಿಕರು ದೂರನ್ನು ಸಲ್ಲಿಸಬಹುದು ಎಂದು ಅರಿವು ಮೂಡಿಸಿದರು.

ಹೆಚ್ಚಿನ ಮಾಹಿತಿಗಾಗಿ ಡಿವೈಎಸ್‌ಪಿ ಹರೀಶ ಜಿ. 9480806317, ರಾಯಚೂರು ಘಟಕ ಪಿಐ. ಎಸಿಬಿ ಎಚ್.ಬಿ.ಸಣಮನಿ 9480806318 ಸಂಖ್ಯೆಗೆ ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.