ADVERTISEMENT

ರಾಯಚೂರಿನ ಕೃಷಿ ಜಮೀನುಗಳಿಗೆ ವಿಜ್ಞಾನಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 15:53 IST
Last Updated 15 ಜುಲೈ 2020, 15:53 IST
ರಾಯಚೂರು ತಾಲ್ಲೂಕಿನ ಮಂಡಲಗೇರಾ ಗ್ರಾಮದ ಕೃಷಿ ಜಮೀನುಗಳಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಂಗಳವಾರ ಭೇಟಿ ನೀಡಿ ರೈತರಿಗೆ ಸಲಹೆಗಳನ್ನು ನೀಡಿದರು
ರಾಯಚೂರು ತಾಲ್ಲೂಕಿನ ಮಂಡಲಗೇರಾ ಗ್ರಾಮದ ಕೃಷಿ ಜಮೀನುಗಳಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಂಗಳವಾರ ಭೇಟಿ ನೀಡಿ ರೈತರಿಗೆ ಸಲಹೆಗಳನ್ನು ನೀಡಿದರು   

ರಾಯಚೂರು: ತಾಲ್ಲೂಕಿನ ಮಂಡಲಗೇರಾ ಗ್ರಾಮದ ಮಲ್ಲೇಶ,ಡಿ. ವೆಂಕಣ್ಣ ಹಾಗೂ ಮಲ್ಲಣ್ಣಗೌಡ ರೈತರ ಜಮೀನುಗಳಿಗೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಸ್.ಯಡಹಳ್ಳಿ, ಕೀಟಶಾಸ್ತ್ರ ವಿಜ್ಞಾನಿ ಡಾ.ಶ್ರೀವಾಣಿ ಜಿ.ಎನ್. ಅವರು ಮಂಗಳವಾರ ಭೇಟಿ ನೀಡಿದರು.

ಹತ್ತಿ ಬಿತ್ತನೆಯಾಗಿದ್ದು, ಮೆಣಸಿನಕಾಯಿ, ಟೊಮ್ಯಾಟೊ ಬೆಳೆಗಳು ಸಸಿಮಡಿ ಹಂತದಲ್ಲಿದ್ದವು. ಹತ್ತಿ ಬೆಳೆಗೆ ರಸ ಹೀರುವ ಕೀಟಗಳ ಬಾಧೆ ಕಂಡು ಬಂದಿದ್ದು, ಮೆಣಸಿನಕಾಯಿ ಹಾಗೂ ಟೊಮ್ಯಾಟೊ ಬೆಳೆಗಳಿಗೆ ಎಲೆಚುಕ್ಕೆ ರೋಗಗಳ ಬಾಧೆ ಕಂಡು ಬಂದಿದ್ದು, ಅದಕ್ಕೆ ಸೂಕ್ತ ಸಲಹೆಗಳನ್ನು ನೀಡಲಾಯಿತು.

ಡಿ.ಬಿ.ಟಿ. ಪ್ರಾಯೋಜಿತ ಕಿಸಾನ್ ಬಯೋಟೆಕ್ ಯೋಜನೆಯ ಅಡಿ ಹತ್ತಿಯಲ್ಲಿ ಸಮಗ್ರ ಬೆಳೆ ಹಾಗೂ ನೀರು ನಿರ್ವಹಣೆ (ಹನಿ ನೀರಾವರಿ)ಯ ಕುರಿತು ವೈಜ್ಞಾನಿಕ ಮಾಹಿತಿಯನ್ನು ನೀಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.