ADVERTISEMENT

ಕೃಷಿ ಚಟುವಟಿಕೆಗಳಿಗೆ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 15:30 IST
Last Updated 30 ಮಾರ್ಚ್ 2020, 15:30 IST

ರಾಯಚೂರು: ಜಿಲ್ಲೆಯಲ್ಲಿ ಈಗಾಗಲೇ ಭತ್ತ ಕಟಾವು ಹಂತಕ್ಕೆ ಬಂದಿರುವುದರಿಂದ ಹಾರ್ವೇಸ್ಟಿಂಗ್‌ಗಳ ಮೂಲಕ ಕಟಾವು ಮಾಡುವ ರೈತರಿಗೆ ಯಾವುದೇ ನಿಬಂಧ ಇರುವುದಿಲ್ಲ.

ಕೃಷಿ ಯಂತ್ರೋಪಕರಣಗಳ ರಿಪೇರಿ ಮಾಡುವ ಅಂಗಡಿಗಳಿಗೆ ನಿರ್ಬಂಧ ಇರುವುದಿಲ್ಲ. ಕೃಷಿಕರು ತಾವು ಬೆಳೆದ ದಾಸ್ತಾನು ಮಾಡಿಕೊಂಡಿರುವ ಭತ್ತವನ್ನು ರೈಸ್ ಮಿಲ್ಲುಗಳಿಗೆ ಸಾಗಿಸಲು ಅನಮತಿ ನೀಡಲಾಗಿದೆ.

ರೈಸ್ ಮಿಲ್‌ಗಳ ಮಾಲೀಕರು ರೈತರಿಂದ ಬರುವ ಅಕ್ಕಿ ಗಿರಣಿ ವಹಿವಾಟು ಪ್ರಕ್ರಿಯೆ ನಡೆಸಲು ಅನುಮತಿಸಲಾಗಿದೆ. ರೈಸ್ ಮಿಲ್ಲುಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸಕ್ಕೆ ಬಂದು ಹೋಗಲು ಯಾವುದೇ ಅಡ್ಡಪಡಿಸುವಂತಿಲ್ಲ. ರೈಸ್ ಮಿಲ್ಲುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಒದಗಿಸಿ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಉತ್ಪಾದನೆಯನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.