ADVERTISEMENT

ರಾಯಚೂರಿನಲ್ಲೇ ಏಮ್ಸ್‌ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 8:19 IST
Last Updated 2 ನವೆಂಬರ್ 2022, 8:19 IST
ಕವಿತಾಳದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ಭಕ್ತರು ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.
ಕವಿತಾಳದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ಭಕ್ತರು ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.   

ರಾಯಚೂರು: ಅಖಿಲ ಭಾರ ತೀಯ ವೈದ್ಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌) ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಭರವಸೆಯನ್ನು ಖಂಡಿತ ಈಡೇರಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಯಚೂರು ಜಿಲ್ಲಾ ಏಮ್ಸ್‌ ಹೋರಾಟ ಸಮಿತಿಯಿಂದ ನಡೆಸುತ್ತಿರುವ ನಿರಂತರ ಧರಣಿಯು ಮಂಗಳವಾರ 173ನೇ ದಿನಕ್ಕೆ ತಲುಪಿದ್ದು, ಈ ಸಂದರ್ಭದಲ್ಲಿ ಭೇಟಿನೀಡಿ ಮಾತನಾಡಿದರು.

ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆ ಆಗುವುದಾದರೆ ಅದು ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಆಗುತ್ತದೆ ಎಂದು ಪೂರ್ಣ ಭರವಸೆಯನ್ನು ನೀಡಿದರು .

ADVERTISEMENT

ಶಾಸಕ ಡಾ. ಶಿವರಾಜ್ ಪಾಟೀಲ, ಹೋರಾಟ ಸಮಿತಿಯ ಡಾ. ಬಸವರಾಜ ಕಳಸ, ಅಶೋಕ್ ಕುಮಾರ್ ಜೈನ್, ಎಂ. ಆರ್. ಭೇರಿ, ಎಸ್ .ಮಾರೆಪ್ಪ, ಬಸಿರುದ್ದಿನ್ ಹೊಸಮನಿ, ವೆಂಕಟೇಶ ಆಚಾರ್ಯ ಆಂಜನೇಯ ಜಾಲಿಬೆಂಚಿ, ಕಾಮ್ ರಾಜ್ ಪಾಟೀಲ, ಗುರುರಾಜ ಕುಲಕರ್ಣಿ,ವೀರಭದ್ರಪ್ಪ ಅಂಬರಪೇಟೆ ಮತ್ತಿತರರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.