ರಾಯಚೂರು: ಜಿಲ್ಲಾ ಏಮ್ಸ್ ಹೋರಾಟ ಸಮಿತಿ ವತಿಯಿಂದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಂಗಳವಾರ 600 ದಿನ ಪೂರೈಸಿತು.
ಪ್ರೊ.ನಂಜುಂಡಪ್ಪ ವರದಿಯಂತೆ ರಾಯಚೂರು ಜಿಲ್ಲೆಗೆ ಐಐಟಿ ನೀಡಬೇಕಿತ್ತು. ಆದರೆ ರಾಜಕೀಯ ಕುತಂತ್ರದಿಂದ ಧಾರವಾಡದ ಪಾಲಾಗಿದೆ. ಐಐಟಿ ವಂಚಿತ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಧರಣಿ ನಡೆಯುತ್ತಿದೆ.
ಹೋರಾಟದ ಸಹ ಸಂಚಾಲಕ ಅಶೋಕಕುಮಾರ ಜೈನ್, ಕಾಮರಾಜ ಪಾಟೀಲ, ಗುರುರಾಜ ಕುಲಕರ್ಣಿ, ಎಸ್.ತಿಮ್ಮಾರೆಡ್ಡಿ, ನರಸಪ್ಪ ಬಾಡಿಯಲ್, ವಿನಯಕುಮಾರ ಚಿತ್ರಗಾರ, ಚಾಂದಪಾಷಾ ಹನುಮಾಪೂರ, ಡಾ.ಎಸ್.ಎಸ್. ಪಾಟೀಲ, ಜಗದೀಶ ಪೂರತಿಪಲಿ, ಮೊಹಮ್ಮದ್ ಇಸಾಕ್, ಎಂ.ಆರ್.ಭೇರಿ, ವೆಂಕಟರೆಡ್ಡಿ ದಿನ್ನಿ, ಬಾಬು ಕವಿತಾಳ, ಬಸವರಾಜ ಮೀಮಕ್ರಿ, ಮಲ್ಲನಗೌಡ, ವೀರಭದ್ರಪ್ಪ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.