ADVERTISEMENT

ಏಮ್ಸ್ ಹೋರಾಟ 1080ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 14:13 IST
Last Updated 26 ಏಪ್ರಿಲ್ 2025, 14:13 IST
ರಾಯಚೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸಿದರು
ರಾಯಚೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸಿದರು    

ರಾಯಚೂರು: ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶನಿವಾರ 1080ನೇ ದಿನಕ್ಕೆ ಪದಾರ್ಪಣೆ ಮಾಡಿದೆ.

ರಾಜ್ಯ ಸರ್ಕಾರದ ಶಿಫಾರಸನ್ನು ಗೌರವಿಸಿ ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ, ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಡಾ.ಬಸವರಾಜ ಕಳಸ, ಅಶೋಕಕುಮಾರ ಜೈನ್, ವಕೀಲ ಎಸ್. ಮಾರಪ್ಪ, ರಮೇಶರಾವ್ ಕಲ್ಲೂರಕರ್, ವೆಂಕಟರೆಡ್ಡಿ ದಿನ್ನಿ, ಶರಣಪ್ಪ ಅಸ್ಕಿಹಾಳ, ಮಹೇಂದ್ರ ಸಿಂಗ್, ವೆಂಕಯ್ಯ ಶೆಟ್ಟಿ ಹೊಸಪೇಟೆ, ಶ್ರೀನಿವಾಸ ಆಚಾರ್ ಜೋಶಿ, ಅಜೀಜ್, ಡಾ. ಜಗದೀಶ ಪೂರತಿಪ್ಪಲಿ, ಆರಿಫ್ ಮಿಯಾ ನೆಲಹಾಳ, ಜೈಭೀಮ್, ವೀರಭದ್ರಯ್ಯ ಸ್ವಾಮಿ, ವಿನಯಕುಮಾರ ಚಿತ್ರಗಾರ, ಆಂಜನೇಯ, ಮಂಜುನಾಥ, ವೆಂಕಟೇಶ ಧರಣಿಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.