ADVERTISEMENT

‘ಸಿಎಂ ಬಳಿ ನಿಯೋಗ: ಸಚಿವರೊಂದಿಗೆ ಚರ್ಚೆ’

ಏಮ್ಸ್‌ ಸ್ಥಾಪನೆಗೆ ಒತ್ತಾಯ: ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:18 IST
Last Updated 28 ಜೂನ್ 2022, 5:18 IST
ಸಿಂಧನೂರಿನ ಶಾಸಕರ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಏಮ್ಸ್ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮಾರೆಪ್ಪ ಮಾತನಾಡಿದರು
ಸಿಂಧನೂರಿನ ಶಾಸಕರ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಏಮ್ಸ್ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮಾರೆಪ್ಪ ಮಾತನಾಡಿದರು   

ಸಿಂಧನೂರು: ‘ರಾಯಚೂರಿನಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಸ್ಥಾಪನೆಗೆ ಒತ್ತಾಯಿಸಿ ಕಳೆದ 50 ದಿನಗಳಿಂದ ನಿರಂತರವಾಗಿ ಧರಣಿ ನಡೆಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬ.ಪಾಟೀಲ ಮುನೇನಕೊಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಪಕ್ಷಾತೀತವಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗ ಒಯ್ಯಲು ತೀರ್ಮಾನಿಸಲಾಗುವುದು’ ಎಂದು ಶಾಸಕ ವೆಂಕಟರಾವ್ ನಾಡಗೌಡ ಭರವಸೆ ನೀಡಿದರು.

ಇಲ್ಲಿನ ಶಾಸಕರ ಭವನದಲ್ಲಿ ನಡೆದ ರಾಜಕೀಯ ಪಕ್ಷಗಳ ಹಾಗೂ ವಿವಿಧ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ, ಧಾರವಾಡ, ಕಲ್ಯಾಣ ಕರ್ನಾಟಕವೆಂದರೆ ಕಲಬುರಗಿ ಎಂದೇ ಭಾವಿಸಲಾಗಿದೆ. ಸರ್ಕಾರದ ಎಲ್ಲ ಮಹತ್ವಾಕಾಂಕ್ಷಿ ಯೋಜನೆಗಳು ಆ ಜಿಲ್ಲೆಗಳಿಗೆ ದೊರೆಯುತ್ತಿವೆ. ರಾಯಚೂರು ಜಿಲ್ಲೆಯಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ’ ಎಂದರು. ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮಾರೆಪ್ಪ ಮಾತನಾಡಿದರು.

ADVERTISEMENT

ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ, ಸಮುದಾಯದ ರಾಜ್ಯ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಮುಖಂಡರಾದ ಬಾಷುಮಿಯಾ, ಬಿ.ಲಿಂಗಪ್ಪ, ಅಶೋಕಗೌಡ ಗದ್ರಟಗಿ, ವೀರಭದ್ರಗೌಡ ಅಮರಾಪುರ, ಎಂ.ಗೋಪಾಲಕೃಷ್ಣ, ಸರಸ್ವತಿ ಪಾಟೀಲ, ವೈ.ನರೇಂದ್ರನಾಥ, ಸಮ್ಮದ್ ಚೌದ್ರಿ, ಗಂಗಣ್ಣ ಡಿಶ್ ಮಾತನಾಡಿದರು. ವೀರಭದ್ರಪ್ಪ ಕುರಕುಂದಿ, ಬಸವರಾಜ ನಾಡಗೌಡ, ಅಯ್ಯನಗೌಡ ಆಯನೂರು, ಶರಣಪ್ಪ ತೆಂಗಿನಕಾಯಿ, ವೆಂಕನಗೌಡ, ಪಂಪಯ್ಯಸ್ವಾಮಿ, ಎಸ್.ಎಂ.ಖಾದ್ರಿ, ಬಾಬರ್‌ಬೇಗ್, ಹುಸೇನಬಾಷಾ, ಬಸವರಾಜ ಬಾದರ್ಲಿ, ಬಸವರಾಜ, ಭೀಮೇಶ, ವೀರೇಶ, ಮೌಲಪ್ಪ, ಎಸ್.ಎನ್.ವೀರೇಶ, ಸುಮಿತ್, ಶಕುಂತಲಾ ಹಾಗೂ ಜಲಜಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.