ಸಿಂಧನೂರು(ರಾಯಚೂರು): 'ಅಂಬಾ ಮಾತಾಕಿ ಜೈ'.. 'ತಾಯಿ ತುಂಗಭದ್ರಗೆ ಜಯವಾಗಲಿ'.. 'ಹರಹರ ಮಹಾದೇವ..'.. 'ತುಂಗಾರತಿಗೆ ಜಯವಾಗಲಿ..' 'ಅಂಬಾ ಮಾತೆಗೆ ಜಯವಾಗಲಿ'.. ಎನ್ನುವ ಭಕ್ತಿ ಭಾವದ ಘೋಷಣೆಗಳ ಮಧ್ಯೆ ತುಂಗಭದ್ರಗೆ ಅಂಬಾ ಆರತಿ ಕಾರ್ಯಕ್ರಮವು ಸೆ.22ರಂದು ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು.
ಗೋಧೂಳಿ ಹೊತ್ತಿಗೆ, ಜಿಟಿಜಿಟಿ ಮಳೆಹನಿಗಳ ಸಿಂಚನದಲ್ಲಿ ವಾರಣಾಸಿಯ ಪ್ರಖ್ಯಾತ ಅರ್ಚಕರ ತಂಡವು ಮುಕ್ಕುಂದಾ ನದಿ ತೀರದಲ್ಲಿ ಅಂಬಾ ಆರತಿಯ ಪೂಜಾ ಕೈಂಕರ್ಯಗಳನ್ನು ಆರಂಭಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮದಿಂದ ಜಯಕಾರದ ಘೋಷಣೆಗಳು ಮೊಳಗಿದವು.
ಮುಕ್ಕುಂದಾ ಸೇರಿದಂತೆ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ತುಂಗಭದ್ರೆಯ ಅಂಗಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಆಂಬಾ ಆರತಿಯ ಸಂಭ್ರಮವನ್ನು ಕಣ್ತುಂಬಿಕೊಂಡರು.
ನೆರೆದಿದ್ದ ಜನರು ತುಂಗಭದ್ರೆಗೆ ಹಾಗೂ ತಾಯಿ ಅಂಬಾದೇವಿಗೆ ಭಕ್ತಿ-ಭಾವದಿಂದ ನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.