ADVERTISEMENT

ಸಿಂಧನೂರು: ಅಂಬಾಮಠದಲ್ಲಿ ಅದ್ಧೂರಿ ಕುಂಭೋತ್ಸವ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 6:01 IST
Last Updated 7 ಜನವರಿ 2026, 6:01 IST
<div class="paragraphs"><p>ಸಿಂಧನೂರು ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದಲ್ಲಿ ನಡೆದ ಕುಂಭೋತ್ಸವದಲ್ಲಿ ಭಕ್ತರು ಪರಸ್ಪರ ಗುಲಾಲು ಎರಚಿಕೊಂಡು ಸಂಭ್ರಮಿಸಿದರು</p></div>

ಸಿಂಧನೂರು ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದಲ್ಲಿ ನಡೆದ ಕುಂಭೋತ್ಸವದಲ್ಲಿ ಭಕ್ತರು ಪರಸ್ಪರ ಗುಲಾಲು ಎರಚಿಕೊಂಡು ಸಂಭ್ರಮಿಸಿದರು

   

ಸಿಂಧನೂರು: ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದಲ್ಲಿ ಮಂಗಳವಾರ ಕುಂಭೋತ್ಸವ ಅದ್ಧೂರಿಯಾಗಿ ಜರುಗಿತು.

ಬೆಳಿಗ್ಗೆ ಅಂಬಾದೇವಿಗೆ ವಿಶೇಷ ಪೂಜೆ, ಅಲಂಕಾರ, ಅಡ್ಡಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ADVERTISEMENT

ಮಧ್ಯಾಹ್ನ ಸಾವಿರಾರು ಭಕ್ತರ ಅಂಬಾದೇವಿ ಉಘೇ.. ಉಘೇ.. ಎಂಬ ಜಯಘೋಷಗಳ ಮಧ್ಯೆ ಕುಂಭೋತ್ಸವ ಆರಂಭಗೊಂಡಿತು. ದೇವಸ್ಥಾನದ ಹಳೆ ಕಟ್ಟಡದಿಂದ ರಥಬೀದಿಯಲ್ಲಿ ಕುಂಭ ಮೆರವಣಿಗೆ ಸಾಗಿತು. ಭಕ್ತರು ಒಬ್ಬರಿಗೊಬ್ಬರು ಗುಲಾಲು ಎರಚಿಕೊಂಡು ಸಂಭ್ರಮಿಸಿದರು.

ತಹಶೀಲ್ದಾರ್ ಅರುಣಕುಮಾರ ದೇಸಾಯಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಸಿ.ಪಿ.ಐ ವೀರಾರೆಡ್ಡಿ, ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ, ಪ್ರಧಾನ ಅರ್ಚಕ ಬ್ರಹ್ಮಾನಂದ ಭಟ್, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಮುಖಂಡರಾದ ಬಸವರಾಜ ಹಿರೇಗೌಡರ್, ರಾಜೇಂದ್ರಗೌಡ ಬಾದರ್ಲಿ ಹಾಗೂ ಆರ್.ಸಿ.ಪಾಟೀಲ ಭಾಗವಹಿಸಿದ್ದರು.