ADVERTISEMENT

ಅಂಬೇಡ್ಕರ್ ಜಯಂತಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 10:36 IST
Last Updated 14 ಏಪ್ರಿಲ್ 2021, 10:36 IST
ಸಿರವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು
ಸಿರವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು   

ಸಿರವಾರ: 'ಅಂಬೇಡ್ಕರ್ ಅವರು ಅಸಮಾನತೆ-ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿ ಸಮಾಜವನ್ನು ತಿದ್ದುವುದರ ಜೊತೆಗೆ ಭವ್ಯ ಭಾರತದ ನಿರ್ಮಾಣದತ್ತ ಗಮನಹರಿಸಿದ್ದರು' ಎಂದು ಪತ್ರಕರ್ತ ಸುರೇಶ ಹೀರಾ ಅಭಿಪ್ರಾಯಪಟ್ಟರು.

ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 130 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಕೃಷ್ಣ ನಾಯಕ ಮಾತನಾಡಿ, ‘ನಮ್ಮ ದೇಶಕ್ಕೆ ಸಂವಿಧಾನ ನೀಡಿದ ಮಹಾನ್ ನಾಯಕ ಅಂಬೇಡ್ಕರ್. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕಾದ ಅಗತ್ಯವಿದೆ’ ಎಂದರು.

ADVERTISEMENT

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲತಾಗುರುನಾಥ ರೆಡ್ಡಿ ಅವರು, ಅಂಬೇಡ್ಕರ್ ಅವರ ಭಾವಚಿತ್ರ ಮಾಲಾರ್ಪಣೆ ಮಾಡಿದರು.

ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ, ಸದಸ್ಯರಾದ ದೇವೇಂದ್ರಪ್ಪ ಸುಂಕೇಶ್ವರಾಳ, ತಿಪ್ಪಣ್ಣ ಚಲುವಾದಿ, ಮುಖಂಡರಾದ ಗುರುನಾಥ ರೆಡ್ಡಿ, ಮಲ್ಲಪ್ಪ, ಎನ್.ಮಲ್ಲಪ್ಪ, ಮಾರ್ಕಪ್ಪ, ತಿಮ್ಮಣ್ಣ ಕಟ್ಟಿಮನಿ, ಹೆಚ್.ಕೆ.ಅಮರೇಶ, ಹಾಜಿ ಚೌದ್ರಿ, ಶಾಂತಪ್ಪ ಪಿತಗಲ್, ಸಿಬ್ಬಂದಿ ಶರಣಬಸವ ಪಾಟೀಲ್, ಸಚಿನ್ ಚ್ಯಾಗಿ, ವೀರೇಶ್ ನೇಕಾರ, ಚಾಂದಪಾಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.