ಸಿಂಧನೂರು: ತಾಲ್ಲೂಕು ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಟ್ರಾಕ್ಟರ್, ರಸಗೊಬ್ಬರ ಮಾರಾಟ ಮಾಡುವ ಕೇಂದ್ರವಾಗಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ್ತು ರಾಯಚೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಭತ್ತ ಬೆಳೆಯಲಾಗುತ್ತದೆ. ಈ ಭಾಗದಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರ ಸಂಖ್ಯೆ ಬಹಳಷ್ಟು ಇದ್ದು ಸಿಂಧನೂರಿನಿಂದ ತಿರುಪತಿಗೆ ನೂತನ ರೈಲು ಓಡಿಸಬೇಕು ಬಿಡಬೇಕು ಎಂದು ಕನಕ ಸಂಸ್ಕಾರ ಬಳಗದ ಅಧ್ಯಕ್ಷ ಬಿ.ಹನುಮೇಶ ಅವರು ಜಲಶಕ್ತಿ ಹಾಗೂ ರೈಲ್ವೆ ಇಲಾಖೆಯ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಬುಧವಾರ ಹೇಳಿಕೆ ನೀಡಿರುವ ಅವರು, ‘ಬಳ್ಳಾರಿ ಇಲ್ಲವೆ, ರಾಯಚೂರು ರೈಲು ನಿಲ್ದಾಣದ ಮೂಲಕವಾಗಿ ತಿರುಪತಿಗೆ ಪ್ರಯಾಣಿಸಬೇಕಿದೆ. ಸಿಂಧನೂರಿನಲ್ಲಿಯೇ ರೈಲ್ವೆ ನಿಲ್ದಾಣವಿದ್ದು ಇಲ್ಲಿಂದಲೇ ನೇರವಾಗಿ ತಿರುಪತಿಗೆ ರೈಲ್ವೆ ಓಡಿಸಿದರೆ ತಾಲ್ಲೂಕು ಸೇರಿದಂತೆ ಸುತ್ತ-ಮುತ್ತಲಿನ ತಾಲ್ಲೂಕುಗಳ ಭಕ್ತರಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.