ADVERTISEMENT

ಸೈನಿಕನ ಮೇಲೆ ಹಲ್ಲೆ: ಆರೋಪಿಗಳ ಗಡೀಪಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:48 IST
Last Updated 10 ಜೂನ್ 2025, 13:48 IST
ಯೋಧನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಗಡೀಪಾರು ಮಾಡುವಂತೆ ಆಗ್ರಹಿಸಿ ಮಾಜಿ ಹಾಗೂ ಹಾಲಿ ಅರೆಸೇನಾಪಡೆಗಳ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಲಿಂಗಸುಗೂರಿನಲ್ಲಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು
ಯೋಧನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಗಡೀಪಾರು ಮಾಡುವಂತೆ ಆಗ್ರಹಿಸಿ ಮಾಜಿ ಹಾಗೂ ಹಾಲಿ ಅರೆಸೇನಾಪಡೆಗಳ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಲಿಂಗಸುಗೂರಿನಲ್ಲಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು   

ಲಿಂಗಸುಗೂರು: ಕಸಬಾಲಿಂಗಸುಗೂರು ಗ್ರಾಮದ ಸಿಆರ್‌ಪಿಎಫ್ ಯೋಧ ಚೆನ್ನಬಸಪ್ಪ ಜೂಲಗುಡ್ಡ ಅವರ ಮೇಲೆ ಮೇ19ರಂದು ಹಲ್ಲೆ ಮಾಡಿದ ಆರೋಪಿಗಳನ್ನು ಗಡೀಪಾರು ಮಾಡಬೇಕು ಎಂದು  ಆಗ್ರಹಿಸಿ ಮಾಜಿ ಹಾಗೂ ಹಾಲಿ ಅರೆಸೇನಾಪಡೆಗಳ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಚೆನ್ನಬಸಪ್ಪ ಜೂಲಗುಡ್ಡ ಅವರು ತಮ್ಮ ಅಕ್ಕನ ಹೊಲದ ಬದುವಿನ ವಿಚಾರವಾಗಿ ಪಕ್ಕದ ಜಮೀನಿನ ಮಾಲೀಕರು ಅಕ್ಕನೊಂದಿಗೆ ಜಗಳ ಮಾಡುತ್ತಿದ್ದನ್ನು ಬಿಡಿಸಲು ಹೋದಾಗ ಅಮರೇಶ ಹಾಗೂ ಮಂಜುನಾಥ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕೂಡಲೇ ಗಡೀಪಾರು ಮಾಡಬೇಕು. ಯೋಧನ ಅಕ್ಕನ ಜಮೀನನ್ನು ಹದ್ದುಬಸ್ತು ಮಾಡಿ ಗಡಿ ಗುರುತಿಸಬೇಕು. ಯೋಧನ ಕುಟಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಹನುಮಂತ ಕನ್ನಾಳ, ಪಂಪಣ್ಣ ಜಾವೂರು, ಕುಪ್ಪಣ್ಣ ಕುರ್ಲಿ, ಸಲೀಂ, ವಿಶ್ವನಾಥ ನಾಯ್ಕ, ಮಹಾಂತೇಶ ಹಿರೇಮಠ, ಪಂಪಯ್ಯ, ಮಾನಪ್ಪ ಬಡಿಗೇರ,ಯಲ್ಲಪ್ಪ ಗೂಗಿಹಾಳ, ಸಂಗಪ್ಪ, ಸಿದ್ದರಾಜು, ನೀಲಪ್ಪ ಮೇಟಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.