ADVERTISEMENT

ರಾಯಚೂರು: ಆತ್ಮಬಂಧು ಎರಡು ಜೀವ ಒಂದು ಕಥಾನಕ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:28 IST
Last Updated 11 ಜನವರಿ 2026, 6:28 IST
ರಾಯಚೂರಿನಲ್ಲಿಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಸಾಹಿತಿ ವೀರಹನುಮಾನ ರಚಿಸಿದ ‘ಆತ್ಮಬಂಧು’ ಎರಡು ಜೀವ, ಒಂದು ಕಥಾನಕ’ ಕೃತಿ ಬಿಡುಗಡೆ ಮಾಡಿದರು
ರಾಯಚೂರಿನಲ್ಲಿಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಸಾಹಿತಿ ವೀರಹನುಮಾನ ರಚಿಸಿದ ‘ಆತ್ಮಬಂಧು’ ಎರಡು ಜೀವ, ಒಂದು ಕಥಾನಕ’ ಕೃತಿ ಬಿಡುಗಡೆ ಮಾಡಿದರು   

ರಾಯಚೂರು: ‘ಸಾಹಿತಿ ವೀರಹನುಮಾನ ಮತ್ತು ಬಿ.ಸುರೇಶ ಅವರು ಎರಡು ದೇಹ ಒಂದೇ ಆತ್ಮದಂತೆ ಇದ್ದವರು. ಜೆ.ಸುರೇಶ ಅವರನ್ನು ಸದಾ ಕಾಲ ನೆನೆಯುವಂತೆ ಕೃತಿಯನ್ನು ರಚಿಸಿರುವುದು ಹೆಮ್ಮೆಯ ಸಂಗತಿ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಶನಿವಾರ ಜಿ.ಸುರೇಶ ಪ್ರತಿಷ್ಠಾನ ಆಯೋಜಿಸಿದ್ದ ಸಾಹಿತಿ ವೀರಹನುಮಾನ ರಚಿಸಿದ ‘ಆತ್ಮಬಂಧು’ ಎರಡು ಜೀವ ಒಂದು ಕಥಾನಕ’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆತ್ಮಬಂಧು ಎರಡು ಜೀವ ಒಂದು ಕಥಾನಕ ಕಾರ್ಯಕ್ರಮವಲ್ಲ. ಜಿ.ಸುರೇಶ ಅವರನ್ನು ಸ್ಮರಿಸುವ ಕಾರ್ಯಕ್ರಮವಾಗಿದೆ. ಸುರೇಶ ಅವರ ಆತ್ಮವಿಚಾರಗಳಿಗೆ ಅಕ್ಷರ ರೂಪ ನೀಡಲಾಗಿದೆ’ ಎಂದು ಬಣ್ಣಿಸಿದರು.

‘ಜಿ.ಸುರೇಶ ಅವರು ಹಿಂದುಳಿದವರ, ಶೋಷಿತರ ಪರವಾಗಿ ಹೋರಾಟ ಮಾಡಿ ಪಕ್ಷದಲ್ಲಿಯೂ ಗುರುತಿಸಿಕೊಂಡಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮದೇ ಛಾಪು ಮೂಡಿಸಿದ್ದರು’ ಎಂದು ತಿಳಿಸಿದರು.

ADVERTISEMENT

ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾತನಾಡಿ, ‘ತಂದೆ ಬಂಗಾರಪ್ಪ ಅವರಿಂದಾಗಿ ನನಗೆ ಜಿ.ಸುರೇಶ ಅವರ ಪರಿಚಯವಾಗಿತ್ತು. ಅಂದಿನಿಂದಲೂ ಜಿ.ಸುರೇಶ ನಮ್ಮ ಮನೆಯ ಬಂಧುವಾಗಿದ್ದರು. ರಾಯಚೂರು ಜಿಲ್ಲೆಯವರೂ ಬಂಗಾರಪ್ಪ ಅವರನ್ನು ಮನೆ ಮಗನಂತೆ ಗೌರವಿಸುತ್ತಿದ್ದರು’ ಎಂದು ಹೇಳಿದರು.

‘ಸುರೇಶ ಕುರಿತಾದ ಕೃತಿಯಲ್ಲಿ ಬಾಲ್ಯದ ಜೀವನ ಹಾಗೂ ಅವರೊಂದಿಗೆ ಕಳೆದ ಒಡನಾಟವನ್ನು ನೆನೆಯಲಾಗಿದೆ. ಸುರೇಶ ಅವರು ಹಿತಚಿಂತಕರಾಗಿದ್ದರು’ ಎಂದು ತಿಳಿಸಿದರು.

‘ಕನ್ನಡ ಸಾಹಿತ್ಯಕ್ಕೆ ಸುರೇಶ ಅವರ ಕೊಡುಗೆ ಅಪಾರವಾಗಿದೆ. ಇಂದಿಗೂ ಜಿಲ್ಲೆಯ ಪ್ರತಿಯೊಬ್ಬರ ಹೃದಯದಲ್ಲಿ ಜಿ.ಸುರೇಶ ನೆಲೆಸಿದ್ದಾರೆ’ ಎಂದು ಹೇಳಿದರು.

ತಾರನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ, ಸಾಹಿತಿ ಮಹಾಂತೇಶ ಮಸ್ಕಿ, ಹನುಮಾನ ದೇವಸ್ಥಾನದ ಆರ್ಚಕ ಹನುಮೇಶಾಚಾರ್, ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟಸಿಂಗ್, ಸಾಹಿತಿ ರಾಮಣ್ಣ ಪವಳೆ, ಕೃತಿಕಾರ ವೀರ ಹನುಮಾನ, ಸದಸ್ಯರಾದ ಮಲ್ಕಪ್ಪ ಪಾಟೀಲ, ಬಸವರಾಜ, ರಾಜೇಶ ಮಡಿವಾಳ, ಅಜೇಯ, ಮುನಿಸ್ವಾಮಿ ಹಾಗೂ ಈರಣ್ಣ ಬೆಂಗಾಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.