ADVERTISEMENT

‘ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ’

ಬಾಲ್ಯ ವಿವಾಹ ತಡೆಯೋಣ ಅಭಿಯಾನದ ಜಾಗೃತಿ ರಥಕ್ಕೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 4:47 IST
Last Updated 12 ಸೆಪ್ಟೆಂಬರ್ 2021, 4:47 IST
ಲಿಂಗಸುಗೂರು ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮಕ್ಕೆ ಶನಿವಾರ ಆಗಮಿಸಿದ ಬಾಲ್ಯ ವಿವಾಹ ತಡೆ ಅಭಿಯಾನದ ಜಾಗೃತಿ ರಥವನ್ನು ಈಚನಾಳ ವಲಯ(ಬಿ) ಮೇಲ್ವಿಚಾರಕಿ ಶ್ರೀದೇವಿ ಹಿರೇಮಠ ಸ್ವಾಗತಿಸಿದರು
ಲಿಂಗಸುಗೂರು ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮಕ್ಕೆ ಶನಿವಾರ ಆಗಮಿಸಿದ ಬಾಲ್ಯ ವಿವಾಹ ತಡೆ ಅಭಿಯಾನದ ಜಾಗೃತಿ ರಥವನ್ನು ಈಚನಾಳ ವಲಯ(ಬಿ) ಮೇಲ್ವಿಚಾರಕಿ ಶ್ರೀದೇವಿ ಹಿರೇಮಠ ಸ್ವಾಗತಿಸಿದರು   

ಲಿಂಗಸುಗೂರು: ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ‘ಬಾಲ್ಯ ವಿವಾಹ ತಡೆಯೋಣ’ ಜಾಗೃತಿ ಅಭಿಯಾನದ ರಥವನ್ನು ಶನಿವಾರ ಹೊನ್ನಹಳ್ಳಿ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶ್ರೀದೇವಿ ಹಿರೇಮಠ ಸ್ವಾಗತಿಸಿದರು.

ಮೇಲ್ವಿಚಾರಕಿ ಶ್ರೀದೇವಿ ಹಿರೇಮಠ ಮಾತನಾಡಿ, ‘ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಅಪೌಷ್ಟಿಕತೆ ನಿವಾರಣೆ, ಮಕ್ಕಳ ಪಾಲನೆ–ಪೋಷಣೆ, ಕಾನೂನಾತ್ಮಕ ರಕ್ಷಣೆ ಜತೆಗೆ ಬಾಲ್ಯ ವಿವಾಹಕ್ಕೆ ಒಳಗಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು’ ಎಂದು ಅವರು ಹೇಳಿದರು.

ಇಲ್ಲದೆ ಹೋದಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಜಾಗೃತಿ ಅಭಿಯಾನ: ಬಾಲ್ಯ ವಿವಾಹ ತಡೆಯೋಣ ರಥವನ್ನು ಸ್ವಾಗತಿಸಿಕೊಂಡು ಅಂಗನವಾಡಿ ನೌಕರರು ಹೊನ್ನಹಳ್ಳಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಅಭಿಯಾನ ನಡೆಸಿದರು.

ಮನೆ ಮನೆಗೆ ತೆರಳಿ ಕರಪತ್ರ ವಿತರಿಸುವುದರ ಜತೆಗೆ ಮಕ್ಕಳ ಕಾನೂನು, ತಪ್ಪು ಕಂಡು ಬಂದಲ್ಲಿ ಎದುರಾಗುವ ಕಾನೂನು ಕ್ರಮಗಳ ಕುರಿತು ಮನವರಿಕೆ ಮಾಡಿಕೊಟ್ಟರು.

ಈಚನಾಳ ವಲಯ (ಬಿ) ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಿ ರಾಠೋಡ, ರೆಹನಾಸುಲ್ತಾನ, ಶರಣಮ್ಮ, ಅಮರಮ್ಮ, ಅನ್ನಪೂರ್ಣ, ಮಡಿವಾಳಮ್ಮ, ಮಹಾಂತಮ್ಮ, ಹುಲಗಮ್ಮ, ಗುರುಸಿದ್ದಮ್ಮ, ಮಾನಮ್ಮ, ಕವಿತಾ, ಹಂಪಮ್ಮ, ಆದಮ್ಮ, ಬಸಲಿಂಗಮ್ಮ, ಮೀನಾಕ್ಷಿ, ಹುಸೇನಮ್ಮ, ಅಂಬಮ್ಮ ಸೇರಿದಂತೆ ಸಹಾಯಕಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.