ADVERTISEMENT

ಅಜೀಮ್ ಪ್ರೇಮಜೀ ಫೌಂಡೇಷನ್‍ನಿಂದ ಆಹಾರ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2021, 13:17 IST
Last Updated 26 ಮೇ 2021, 13:17 IST
ರಾಯಚೂರಿನ ಹಾಶ್ಮಿಯಾ ಶಾಲೆಯ ಆವರಣದಲ್ಲಿ ಬುಧವಾರ ಅಜೀಮ್ ಪೇಮ್‍ಜಿ ಫೌಂಡೇಷನ್ ನಿಂದ 100ಜನ ಬಡ, ದಮನಿತ ಮಹಿಳೆಯರಿಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಣೆ ಮಾಡಲಾಯಿತು
ರಾಯಚೂರಿನ ಹಾಶ್ಮಿಯಾ ಶಾಲೆಯ ಆವರಣದಲ್ಲಿ ಬುಧವಾರ ಅಜೀಮ್ ಪೇಮ್‍ಜಿ ಫೌಂಡೇಷನ್ ನಿಂದ 100ಜನ ಬಡ, ದಮನಿತ ಮಹಿಳೆಯರಿಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಣೆ ಮಾಡಲಾಯಿತು   

ರಾಯಚೂರು: ಲಾಕ್‌ಡೌನ್‌ನಿಂದಾಗಿ ಬಡವರು ಹಾಗೂ ನಿರ್ಗತಿಕರಿಗೆ ಜೀವನ ನಿರ್ವಹಣೆ ಅನುಕೂಲವಾಗುವ ನಿಟ್ಟಿನಲ್ಲಿ ಅಜೀಮ್ ಪ್ರೇಮ್‍ಜೀ ಫೌಂಡೇಷನ್‍ನಿಂದ ಬುಧವಾರ ಆಹಾರ ಕಿಟ್ ವಿತರಣೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್ ದುರುಗೇಶ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಹಾಶ್ಮಿಯಾ ಶಾಲೆಯ ಆವರಣದಲ್ಲಿ ಅಜೀಮ್ ಪೇಮ್‍ಜಿ ಫೌಂಡೇಷನ್ ನಿಂದ 100 ಜನ ದಮನಿತ ಮಹಿಳೆಯರಿಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಣೆ ಮಾಡಿ ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಅಜೀಮ್ ಪ್ರೇಮ್ ಜೀ ಫೌಂಡೇಶನ್ ಆರೋಗ್ಯ ರಕ್ಷಣೆ ಬೇಕಾದ ಆಸ್ಪತ್ರೆಗೆ ಸಾವಿರಾರು ಕೋಟಿ ರೂಪಾಯಿಗಳ ಉಪಕರಣಗಳನ್ನು ನೀಡಿದ್ದಾರೆ. ಫೌಂಡೇಷನ್ ಕಾರ್ಯ ಅತ್ಯಂತ ಬಡವರ ಕಾಳಜಿಯಾಗಿದೆ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ಬರಲಿ ಎಂದು ತಿಳಿಸಿದರು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಡಿ.ವೀರನಗೌಡ, ದೇವದಾಸಿ ಯೋಜನೆಯ ಪುನರ್ವಸತಿ ಜಿಲ್ಲಾ ಯೋಜನಾಧಿಕಾರಿ ಜಿ.ಬಿ.ಗೋಪಾಲ ನಾಯಕ. ಜಿಲ್ಲಾ ಎಡ್ಸ್ ನಿಯಂತ್ರಣ ಅಧಿಕಾರಿ ಡಾ. ಸುರೇಂದ್ರ ಬಾಬು. ಕಾರ್ಯಕ್ರಮ ಸಂಯೋಜಕ ಮಠಪತಿ,ಅಜೀಮ್ ಪ್ರೇಮ್‍ಜೀ ಫೌಂಡೇಶನ್ ಸಂಯೋಜಕ ಅಡಿವೆಪ್ಪ. ಸಹ ಸಂಯೋಜಕ ಶ್ರೀನಿವಾಸ ಕುಲಕರ್ಣಿ, ಎ.ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.