ADVERTISEMENT

ರಾಯಚೂರು | ಬೈಕ್‌ ಪೆಟ್ರೋಲ್ ಕಳವು: ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 21:25 IST
Last Updated 12 ಡಿಸೆಂಬರ್ 2021, 21:25 IST
ಜಾಲಹಳ್ಳಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ ಬೈಕ್‌ನಿಂದ ಪೆಟ್ರೋಲ್ ಕದಿಯುತ್ತಿರುವುದು ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಜಾಲಹಳ್ಳಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ ಬೈಕ್‌ನಿಂದ ಪೆಟ್ರೋಲ್ ಕದಿಯುತ್ತಿರುವುದು ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ   

ಜಾಲಹಳ್ಳಿ: ಪಟ್ಟಣದಲ್ಲಿ ಶನಿವಾರ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ನಲ್ಲಿರುವ ಪೆಟ್ರೋಲ್ ಕದಿಯುತ್ತಿರುವ ಘಟನೆ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಘಟನೆ ಜರುಗಿದೆ.

ಪಟ್ಟಣದಲ್ಲಿ ಬೈಕ್ ಸೇರಿದಂತೆ ಇತರೆ ಬೆಲೆ ಬಾಳುವ ವಸ್ತುಗಳನ್ನು ಕದಿಯುವ ಚಾಳಿ ನಿರಂತರವಾಗಿ ನಡೆಯುತ್ತಿದೆ. ಶನಿವಾರ ರಾತ್ರಿ ಅಂಬೇಡ್ಕರ್ ವೃತ್ತದಲ್ಲಿರುವ ಮನೆಯ ಮುಂದೆ ನಿಲ್ಲಿಸಿದ ಬೈಕ್‌ನಿಂದ ಕಳ್ಳನೊಬ್ಬ ಪೆಟ್ರೋಲ್ ಕಳುವು ಮಾಡಿದ್ದಾನೆ. ಪಟ್ಟಣದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ರಾತ್ರಿ ಗಸ್ತು ಇದ್ದರೂ ಸಹ ಇಂತಹ ಘಟನೆಗಳು ಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿವೆ. ಕಳ್ಳರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಮದ್ಯವ್ಯಸನಿಗಳು ಹಣಕ್ಕಾಗಿ ಇಂತಹ ಕೃತ್ಯ ಮಾಡುತ್ತಿರುವುದು ಕಂಡುಬರುತ್ತದೆ.

ಈಗಾಗಲೇ ಅನೇಕ ಬೈಕ್‌ಗ ಕಳ್ಳತನ ನಡೆದಿದೆ. ಪ್ರಕರಣ ದಾಖಲಿಸದೇ ಹಾಗೆಯೇ ಬಿಟ್ಟಿರುವುದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪೆಟ್ರೋಲ್‌ ಕದಿಯುವವರನ್ನು ಸೆರೆ ಹಿಡಿಯುವಂತೆ ಜನರು ಪೊಲೀಸ್‌ರಿಗೆ ಮನವಿ ಮಾಡಿದ್ದಾರೆ. ’ಇಂತಹ ಘಟನೆಗಳು ನಡೆಯಬಾರದು. ನಮ್ಮ ಪೊಲೀಸರು ನಿತ್ಯ ರಾತ್ರಿ ಪ್ರಮುಖ ವೃತ್ತಗಳಲ್ಲಿ ಗಸ್ತು ಇರುತ್ತಾರೆ. ಕಳ್ಳತನ ತಡೆಯಲು ಮುಂದಿನ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುವುದು’ ಎಂದು ಪಿಎಸ್ಐ ಮುದ್ದರಂಗಯ್ಯ ಸ್ವಾಮಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.