
ಲಿಂಗಸುಗೂರು: ಬೈಕ್–ಸ್ಕೂಟಿ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದರೆ, ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ರಾಯಚೂರು ರಸ್ತೆಯಲ್ಲಿ ಶುಕ್ರವಾರ ಅಪಘಾತ ನಡೆದಿದೆ.
ಪಟ್ಟಣದ ನಿವಾಸಿ ಸಿದ್ಧಯ್ಯ ಗುರುಮೂರ್ತೆಯ್ಯ ಯರಡೋಣ(38), ಪ್ರೀತಂ ಕಿರಣ್(18) ಮೃತರು. ಆನಂದ ಪತ್ತಾರ ಹಾಗೂ ಸಂಜಯ ಕುಮಾರ ಅವರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪಟ್ಟಣದ ರಾಯಚೂರು ರಸ್ತೆ ನಾಯರ್ ಪೆಟ್ರೋಲ್ ಬಂಕ್ ಬಳಿ ಆನಂದ ಪತ್ತಾರ, ಸಿದ್ಧಯ್ಯ ಪ್ರಯಾಣಿಸುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ಕೆಟಿಎಂ ಬೈಕ್ ಅತಿವೇಗದಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಡೆಸುತ್ತಿದ್ದ ಪ್ರೀತಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಿದ್ಧಯ್ಯನನ್ನು ಬಾಗಲಕೋಟೆಗೆ ಕರೆದೊಯ್ಯವಾಗ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.