ADVERTISEMENT

ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿ: ಟೀಕೆ

ಭಾರತ ಜೊಡೋ, ಯುವ ಕಾಂಗ್ರೆಸ್‍ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 12:45 IST
Last Updated 11 ಸೆಪ್ಟೆಂಬರ್ 2022, 12:45 IST
ಲಿಂಗಸುಗೂರಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಭಾರತ ಜೊಡೋ ಮತ್ತು ಯುತ್ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ನಾಯಕ ಮಾತನಾಡಿದರು
ಲಿಂಗಸುಗೂರಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಭಾರತ ಜೊಡೋ ಮತ್ತು ಯುತ್ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ನಾಯಕ ಮಾತನಾಡಿದರು   

ಲಿಂಗಸುಗೂರು: ‘ಶಾಸಕ ಡಿ.ಎಸ್‍.ಹೂಲಗೇರಿ ಟಿಕೆಟ್‍ ನೀಡಿಕೆಗೆ ಸಂಬಂಧಿಸಿದಂತೆ ಕೆಲವರು ಗೊಂದಲ ಸೃಷ್ಠಿಸುತ್ತಿದ್ದಾರೆ. ಅಂತಹ ಊಹಾ ಪೋಹಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು’ ಎಂದು ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷ ಬಿ.ವಿ ನಾಯಕ ಹೇಳಿದರು.

ಶನಿವಾರ ಭಾರತ ಜೊಡೋ ಮತ್ತು ಯುವ ಕಾಂಗ್ರೆಸ್‍ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‍ ಪಕ್ಷದಲ್ಲಿ ಹೆಚ್ಚು ಆಕಾಂಕ್ಷಿಗಳು ಇರುವುದರಿಂದ ಗೊಂದಲಗಳು ಸಹಜ. ಶಾಸಕರಾಗಿ ಹೂಲಗೇರಿ ಜಿಲ್ಲೆಯಲ್ಲಿಯೆ ಉತ್ತಮ ಕೆಲಸ ಕಾರ್ಯ ಮಾಡಿಕೊಂಡು ಬಂದಿದ್ದಾರೆ’ ಎಂದರು.

ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ ಮಾತನಾಡಿ, ‘ಜಾತಿ, ಧರ್ಮಗಳ ಹೆಸರಲ್ಲಿ ದೇಶ ವಿಭಜನೆ ಮಾಡುತ್ತಿರುವ ಬಿಜೆಪಿ ನೇತೃತ್ವ ಸರ್ಕಾರಗಳಿಂದ ಜನತೆ ಬೇಸತ್ತು ಹೋಗಿದ್ದಾರೆ. ದೇಶದ್ರೋಹಿ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಮುಕ್ತ ರಾಷ್ಟ್ರ ನಮ್ಮ ಕನಸಾಗಿದೆ’ ಎಂದರು.

ADVERTISEMENT

ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್ಲ, ಬ್ಲಾಕ್‍ ಕಾಂಗ್ರೆಸ್‍ ಮಾಜಿ ಅಧ್ಯಕ್ಷ ಶರಣಪ್ಪ ಮೇಟಿ, ಮುಖಂಡರಾದ ಡಿ.ಜಿ ಗುರಿಕಾರ, ಪಾಮಯ್ಯ ಮುರಾರಿ ಮಾತನಾಡಿದರು.

ಕಾಣದ ಭಾವಚಿತ್ರಗಳು: ವೇದಿಕೆ ಮೇಲಿನ ಬ್ಯಾನರ್ ಗಳಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮತ್ತು ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಭಾವಚಿತ್ರಗಳು ಕಾಣದಿರುವುದು ಕೆಲವರಲ್ಲಿ ಚರ್ಚೆಗೆ ಕಾರಣವಾಗಿತ್ತು.

ಮುದಗಲ್‌ ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ದಾವೂದ್‍. ಮಹಿಳಾ ಕಾಂಗ್ರೆಸ್‍ ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ ದೇಸಾಯಿ, ಯುತ್‍ ಕಾಂಗ್ರೆಸ್‍ ತಾಲ್ಲೂಕು ಅಧ್ಯಕ್ಷ ಕುಪ್ಪಣ್ಣ ಕವಿತಾಳ, ಎಂ.ಡಿ ರಫಿ, ಚೆನ್ನಬಸವ ವಿಠಲಾಪುರ, ಬಸನಗೌಡ ಕಂಬಳಿ, ಸಂಗಣ್ಣ ದೇಸಾಯಿ, ಗುಂಡಪ್ಪ ಕಾಚಾಪುರ, ಗುಂಡಪ್ಪ ನಾಯಕ, ಮಹಾಂತೇಶ ಪಾಟೀಲ, ಶಿವಾನಂದ ಐದನಾಳ, ಹೊನ್ನಪ್ಪ ಮೇಟಿ, ವಾಹಿದ್‍ ಖಾದ್ರಿ, ನಿಂಗಪ್ಪ ಮನಗುಳಿ, ಚೆನ್ನಾರೆಡ್ಡಿ ಬಿರಾದರ, ಪರಶುರಾಮ ನಗನೂರು, ಪರಸಪ್ಪ ಹುನಕುಂಟಿ, ವೆಂಕಟೇಶ ಗುತ್ತೆದಾರ, ಶಿವಪ್ಪ ಕೋಠ, ಸೇರಿದಂತೆ ಪಕ್ಷದ ವಿವಿಧ ಭಾಗಗಳ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.