ADVERTISEMENT

‘ಬ್ರಾಹ್ಮಣರು ಸಂಘಟಿತ ಹೋರಾಟಕ್ಕೆ ಮುಂದಾಗಲಿ’

​ಪ್ರಜಾವಾಣಿ ವಾರ್ತೆ
Published 29 ಮೇ 2022, 15:23 IST
Last Updated 29 ಮೇ 2022, 15:23 IST
ಲಿಂಗಸುಗೂರು ರಾಘವೇಂದ್ರ ಮಠದಲ್ಲಿ ಆಯೋಜಿಸಿದ್ದ ಬ್ರಾಹ್ಮಣ ಮಹಾಸಭಾ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಘಟಕ ಅಧ್ಯಕ್ಷ ಡಿ.ಕೆ.ಮುರಳಿ ಮಾತನಾಡಿದರು
ಲಿಂಗಸುಗೂರು ರಾಘವೇಂದ್ರ ಮಠದಲ್ಲಿ ಆಯೋಜಿಸಿದ್ದ ಬ್ರಾಹ್ಮಣ ಮಹಾಸಭಾ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಘಟಕ ಅಧ್ಯಕ್ಷ ಡಿ.ಕೆ.ಮುರಳಿ ಮಾತನಾಡಿದರು   

ಪ್ರಜಾವಾಣಿ ವಾರ್ತೆ

ಲಿಂಗಸುಗೂರು: ‘ಬ್ರಾಹ್ಮಣರು ರಾಜ್ಯ ಘಟಕ ಅಧ್ಯಕ್ಷ ಹಾರನಹಳ್ಳಿ ಅಶೋಕ ನೇತೃತ್ವದಲ್ಲಿ ಸರ್ಕಾರದ ಸೌಲಭ್ಯ ಮತ್ತು ಬಂಧುಗಳ ಹಿತರಕ್ಷಣೆಗೆ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು’ ಎಂದು ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ಡಿ.ಕೆ ಮುರಳಿ ಮನವಿ ಮಾಡಿದರು.

ಭಾನುವಾರ ರಾಘವೇಂದ್ರ ಮಠದಲ್ಲಿ ಕರೆದಿದ್ದ ಬ್ರಾಹ್ಮಣ ಮಹಾಸಭಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಸಮಾಜ ಬಂಧುಗಳನ್ನು ಮುಖ್ಯವಾಹಿನಿಗೆ ಕರೆತರಲು ಹಾಗೂ ಸಮಾಜದವ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಮಾನಸಿಕ ಕಿರುಕುಳ ತಡೆಯಲು ಸಂಘಟನೆ ಅನಿವಾರ್ಯವಾಗಿದೆ’ ಎಂದರು.

ADVERTISEMENT

ರಾಜ್ಯ ಉಪಾಧ್ಯಕ್ಷ ಡಾ. ಆನಂದ ಫಡ್ನವಿಸ್‍, ಜಿಲ್ಲಾ ಸಂಚಾಲಕ ಅರವಿಂದ ಕುಲಕರ್ಣಿ ಮಾತನಾಡಿ, ‘ಬ್ರಾಹ್ಮಣರು ತಾಲ್ಲೂಕು, ಹೋಬಳಿ, ಗ್ರಾಮೀಣ ಮಟ್ಟದಲ್ಲಿರುವ ಬ್ರಾಹ್ಮಣರನ್ನು ಸಂಘಟಿಸಲು ಕಾರ್ಯಪ್ರವೃತ್ತರಾಗಬೇಕು. ಹೆಚ್ಚಿನ ಸದಸ್ಯರ ನೋಂದಣಿಗೆ ಶ್ರಮಿಸಬೇಕು. ಮಹಿಳಾ ಘಟಕಗಳ ರಚನೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಬ್ರಾಹ್ಮಣ ಮಹಸಭಾ ಜಿಲ್ಲಾ ಪದಾಧಿಕಾರಿಗಳಾದ ರಾಘವೇಂದ್ರ ಚುಡಾಮಣಿ, ನಾರಾಯಣರಾವ ಪುರತಿಪ್ಲಿ. ಮುಖಂಡರಾದ ರಾಘವೇಂದ್ರ ಕಲಮಲ, ವಿನೋದ ಕೆ, ಹನುಮೇಶ ಸರಾಫ್‍, ಪ್ರಸನ್ನ, ಗುರುರಾಜ ಮುತಾಲಿಕ, ಪ್ರಮೋದ ಕುಲಕರ್ಣಿ, ಪ್ರಾಣೇಶ ಜಾವೂರು, ಅಶೋಕ ದಿಗ್ಗಾವಿ, ನಾರಾಯಣ ಬಿಜ್ಜೂರು, ರಾಘವೇಂದ್ರ ಗುಮಾಸ್ತೆ, ಲಕ್ಷ್ಮಿಕಾಂತ ದೇಶಪಾಂಡೆ, ಬಲಭೀಮ ಹಟ್ಟಿ, ಕಿಶೋರ ಮುತಾಲಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.