ರಾಯಚೂರು: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊರ ಗುತ್ತಿಗೆ ಸಿಬ್ಬಂದಿ ಕಲಾವಿದರಿಂದ ಇಲಾಖೆಯ ಧನಸಹಾಯ ಪಡೆಯಲು ₹15 ಲಕ್ಷ ಲಂಚ ಪಡೆದಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರವಾದವು’ ಎಂದು ಅಹಿಂದ ಕಲಾವಿದರ ಒಕ್ಕೂಟದ ಸದಸ್ಯ ಅಲ್ತಾಫ್ ರಂಗಮಿತ್ರ ಸ್ಪಷ್ಟಪಡಿಸಿದರು.
‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಕಲಾವಿದರಿಂದ ಹಣ ತೆಗೆದುಕೊಂಡಿದ್ದಾರೆ ಎಂದು ಲಿಖಿತ ದೂರು ನೀಡಲಾಗಿದೆ. ಕಲಬುರಗಿಯ ಜಂಟಿ ನಿರ್ದೇಶಕರು ತನಿಖೆ ಪ್ರಾರಂಭ ಮಾಡಿದ್ದಾರೆ. ಶೀಘ್ರ ಸತ್ಯ ಹೊರಬರಲಿದೆ’ ಎಂದು ಹೇಳಿದರು.
‘ಲಂಚ ಪಡೆದಿದ್ದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕಿತ್ತು. ಯಾಕೇ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಲಂಚದ ಪ್ರಕರಣವು ಅಪರಾಧ ಪ್ರಕರಣವಾಗಿದ್ದು, ಲಂಚ ಕೊಟ್ಟವರಿಗೆ ಹಾಗೂ ಲಂಚ ಪಡೆದವರಿಗೆ ನ್ಯಾಯಾಲಯ ಶಿಕ್ಷೆ ನೀಡುತ್ತಿತ್ತು’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ, ಶಿವಾನಂದಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.