ADVERTISEMENT

ತೆಲಂಗಾಣಕ್ಕೆ ಬಸ್ ಆರಂಭ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 2:31 IST
Last Updated 26 ಸೆಪ್ಟೆಂಬರ್ 2020, 2:31 IST

ರಾಯಚೂರು: ಜಿಲ್ಲೆಯ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ನೆರೆ ರಾಜ್ಯ ತೆಲಂಗಾಣಕ್ಕೆ ಶನಿವಾರದಿಂದ ಬಸ್ ಸಂಚಾರ ಪ್ರಾರಂಭವಾಗಲಿದೆ.

ಕೇಂದ್ರ ಕಚೇರಿಯ ನಿರ್ದೇಶನದ ಪ್ರಕಾರ, ನೆರೆಯ ತೆಲಂಗಾಣ ರಾಜ್ಯದ ವ್ಯಾಪ್ತಿಯ ಹೈದರಾಬಾದ್, ಗದ್ವಾಲ, ವನಪರ್ತಿ ಮತ್ತು ಐಜಿ ಮಾರ್ಗದಲ್ಲಿ ಕರ್ನೂಲ ಹಾಗೂ ಶ್ರೀಶೈಲವರೆಗೆ ಬಸ್‍ಗಳು ಸಂಚರಿಸಲಿವೆ.

ಕೋವಿಡ್‌ ಮುಂಜಾಗೃತ ಕ್ರಮವಾಗಿ ಮಾರ್ಚ್ 23ರಿಂದ ಮೇ 3ರ ವರೆಗೆ ಗ್ರಾಮಾಂತರ ಸಾರಿಗೆ ಸೇರಿದಂತೆ ಎಲ್ಲಾ ಅಂತರ ರಾಜ್ಯ ಮತ್ತು ವೇಗದೂತ ಸಂಚಾರ ಮಾರ್ಗಗಳನ್ನು ರದ್ದುಪಡಿಸಲಾಗಿತ್ತು.

ADVERTISEMENT

ಇದೀಗ ಬಸ್‌ಗಳ ಸಂಚಾರ ಆರಂಭ ಮಾಡಲಾಗಿದೆ ಎಂದು ರಾಯಚೂರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.