ADVERTISEMENT

ಮಸ್ಕಿ: ತುಂಗಭದ್ರಾ ಕಾಲುವೆ ಸೋರಿಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:16 IST
Last Updated 25 ಜುಲೈ 2021, 3:16 IST
ಮಸ್ಕಿ ತಾಲ್ಲೂಕು ವ್ಯಾಪ್ತಿಯ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲ್ 69 ರ ಬಳಿ ಎಸ್ಕೇಪ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ನೀರಿನ ಸೋರಿಕೆ ಆಗುತ್ತಿರುವುದನ್ನು ಅಧಿಕಾರಿಗಳು ಶನಿವಾರ ಪರಿಶೀಲಿಸಿದರು
ಮಸ್ಕಿ ತಾಲ್ಲೂಕು ವ್ಯಾಪ್ತಿಯ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲ್ 69 ರ ಬಳಿ ಎಸ್ಕೇಪ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ನೀರಿನ ಸೋರಿಕೆ ಆಗುತ್ತಿರುವುದನ್ನು ಅಧಿಕಾರಿಗಳು ಶನಿವಾರ ಪರಿಶೀಲಿಸಿದರು   

ಮಸ್ಕಿ: ತಾಲ್ಲೂಕು ವ್ಯಾಪ್ತಿಯ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲ್-69ರ ಬಳಿ ಸಣ್ಣ ಪ್ರಮಾಣದಲ್ಲಿ ನೀರಿನ ಸೋರಿಕೆ ಕಂಡು ಬಂದಿದೆ.

ಸಣ್ಣ ರಂಧ್ರದ ಮೂಲಕ ನೀರು 0.5 ಕ್ಯುಸೆಕ್ ಹೊರ ಹೋಗುತ್ತಿದೆ. ಎಸ್ಕೇಪ್ ಗೋಡೆ ಮತ್ತು ಅದರ ಪಕ್ಕದಲ್ಲಿ ಹಾಕಿರುವ ಮಣ್ಣಿನ ನಡುವೆ ಈ ಸೋರಿಕೆ ಉಂಟಾಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.

‘ಸಣ್ಣ ಪ್ರಮಾಣದ ಸೋರಿಕೆಯಿಂದ ಕಾಲುವೆಗೆ ಯಾವುದೇ ಧಕ್ಕೆ ಇಲ್ಲಾ. ರೈತರು ಆತಂಕ ಪಡಬೇಕಾಗಿಲ್ಲ. ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ’ ಎಂದು ಎಂಜಿನಿಯರ್ ದಾವುದ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.