ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು 9ನೇ ಚಾತುರ್ಮಾಸ್ಯದ ದೀಕ್ಷೆಯನ್ನು ಸಂಕಲ್ಪ ಮಾಡುವ ಮೂಲಕ ಶುಕ್ರವಾರ ಸ್ವೀಕರಿಸಿದರು.
ಶ್ರೀಪಾದಂಗಳವರ ಚಾತುರ್ಮಾಸ್ಯದ ವ್ರತದ ಸಂಕಲ್ಪದ ನಿಮಿತ್ತ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಲಾಯಿತು. ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಮಠದಲ್ಲಿರುವ ಎಲ್ಲ ಯತಿಗಳ ಬೃಂದಾವನಗಳಿಗೂ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ಸಂಕಲ್ಪ ಮಾಡಿ ಶ್ರೀಗಳು ಚಾತುರ್ಮಾಸ್ಯ ದೀಕ್ಷೆಯನ್ನು ಪಡೆದರು.
ಇದೇ ವೇಳೆ, ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಎದುರಿನ ತೇರು ಬೀದಿಯಲ್ಲಿ ಎರಡು ಬದಿಯಲ್ಲಿ ಗೋಡೆಗಳ ನಿರ್ಮಾಣ ಕಾಮಗಾರಿಗೆ ಶ್ರೀಗಳು ಚಾಲನೆ ನೀಡಿದರು.
ಮಠದ ವಿದ್ವಾಂಸರು, ಪಂಡಿತರು, ಅಧಿಕಾರಿಗಳು, ಶಿಷ್ಯ ವರ್ಗ, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.