ADVERTISEMENT

ಬಿಸಿಲೂರಲ್ಲಿ ಸ್ವಚ್ಛತಾ ಓಟ: ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಭಾಗಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 10:14 IST
Last Updated 12 ಜನವರಿ 2026, 10:14 IST
   

ರಾಯಚೂರು: ಸ್ವಚ್ಛ ಭಾರತ ಮಿಷನ್ ಹಾಗೂ ರಾಯಚೂರು ಉತ್ಸವ–2026ರ ಅಂಗವಾಗಿ ನಗರದಲ್ಲಿ ಸೋಮವಾರ ರಾಯಚೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಸ್ವಚ್ಛತಾ ಓಟ ನಡೆಯಿತು.

ಸಚಿವರು, ಸಂಸದರು, ಶಾಸಕರ ಮಾರ್ಗದರ್ಶದಡಿಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೋಹಪಾತ್ರ ಅವರು ವಿಶೇಷವಾಗಿ ರೂಪಿಸಿದ ಈ ಸ್ವಚ್ಛತಾ ಓಟವು ಯುವಜನತೆಗೆ ಪ್ರೇರಣೆ ನೀಡಿತು. ರಾಯಚೂರು ಜನತೆಯಲ್ಲಿ ತಮ್ಮ ನಗರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಸುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿತು.

ಸಂಸದ ಜಿ. ಕುಮಾರನಾಯಕ ಅವರು ಸ್ವಚ್ಛತಾ ಓಟಕ್ಕೆ ಚಾಲನೆ ನೀಡಿ ‘ ಸ್ವಾಮಿ ವಿವೇಕಾನಂದರ ಮೌಲ್ಯಗಳು, ಸದೃಢ ಶರೀರ ಮತ್ತು ಮನಸ್ಸಿನ ಮಹತ್ವ ಮತ್ತು ಸ್ವಚ್ಛ, ಆರೋಗ್ಯಕರ ವಾತಾವರಣ ನೆನಪಿಸಿದರು.

ADVERTISEMENT

ಸ್ವಚ್ಛತಾ ಓಟದಲ್ಲಿ 3000 ಜನರು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಿಂದ- 65ರ ವಯೋಮಾನದವರು ಓಟದಲ್ಲಿ ಕಂಡು ಬಂದರು. ವಿದ್ಯಾರ್ಥಿಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಅಧಿಕಾರಿಗಳು, ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.

ರಾಯಚೂರು ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ಮ್ಯಾರಥಾನ್ ಓಟಕ್ಕೆ ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದು ಮಹತ್ವದ ಸಾಧನೆಯಾಗಿ ರಾಯಚೂರು ಇತಿಹಾಸದಲ್ಲಿ ದಾಖಲಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಾನವ ಸರಪಳಿಯನ್ನು ‘ರಾಯಚೂರು ಉತ್ಸವ–2026’ ಎಂಬ ರೂಪದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅದನ್ನು ಡ್ರೋನ್ ಮೂಲಕ ಚಿತ್ರೀಕರಿಸಲಾಯಿತು. ಈ ದೃಶ್ಯವು ರಾಯಚೂರು ಉತ್ಸವಕ್ಕೆ ಮತ್ತಷ್ಟು ಹುಮ್ಮಸು ನೀಡಿತು.

ಜಿಲ್ಲಾಧಿಕಾರಿ ನಿತೀಶ್‌ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ, ಮಹಾನಗರ ಪಾಲಿಕೆಯ ಸಮಿತಿ ಕಾರ್ಯದರ್ಶಿ ಹಾಗೂ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರಾ, ಪಾಲಿಕೆಯ ವಲಯ 1ರ ಆಯುಕ್ತ ಪುಲಮ್ ಸಿಂಗ್, ಉಪ ಆಯುಕ್ತೆ ಸಂತೋಷ ರಾಣಿ, ರಾಯಚೂರು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ರಾಯಚೂರು ತಹಶೀಲ್ದಾರ್ ಸುರೇಶ ವರ್ಮ, ಅರಕೇರಾ ತಹಶೀಲ್ದಾರ್ ಅಮರೇಶ ಬಿರಾದಾರ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.