ADVERTISEMENT

ಗ್ರಾಮ ವಾಸ್ತವ್ಯಕ್ಕೆ ಹೋಗುವಾಗ ಸಿಎಂ ಬಸ್‌ಗೆ ಟಿಎಲ್‌ಬಿಸಿ ಕಾರ್ಮಿಕರಿಂದ ಅಡ್ಡಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 6:05 IST
Last Updated 26 ಜೂನ್ 2019, 6:05 IST
   

ರಾಯಚೂರು: ತುಂಗಭದ್ರಾ ಎಡದಂಡೆ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ ಹಾಗೂ ವೈಟಿಪಿಎಸ್ ಕಾರ್ಮಿಕರ ಸಂಘದ ಸದಸ್ಯರು ಸಿಎಂ ತೆರಳುತ್ತಿದ್ದ ಬಸ್‌ಗೆ ಅಡ್ಡಿಯನ್ನುಂಟು ಮಾಡಿ ಪ್ರವಾಸಿ ಮಂದಿರ ಬಳಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ಬಸ್‌ನ ಬಾಗಿಲಲ್ಲೇ ನಿಂತು ಮುಖ್ಯಮಂತ್ರಿ ಜನರ ಜತೆ ಮಾತನಾಡಿದರು.

14 ತಿಂಗಳು ಬಾಕಿ ವೇತನ ಮತ್ತು ವಜಾಗೊಳಿಸಿದ 410 ಕಾರ್ಮಿಕರ ಪುನರ್ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಹೋರಾಟಗಾರರಿಂದ ಮುಖ್ಯಮಂತ್ರಿ ಮನವಿ ಸ್ವೀಕರಿಸಿದ ನಂತರವೂ ಹೋರಾಟಗಾರರು ಸಮಾಧಾನವಾಗಲಿಲ್ಲ, ಮತ್ತೆ ಅಡ್ಡಿಪಡಿಸಿದರು. ಇದರಿಂದ 10 ನಿಮಿಷ ಬಸ್ ನಲ್ಲಿ ಸಿಎಂ ಕಾದು ಕುಳಿತುಕೊಳ್ಳುವಂತಾಯಿತು.

ರಸ್ತೆ ತಡೆ ಮಾಡಿದ ಹೋರಾಟ ಗಾರರನ್ನು ತೆರವುಗೊಳಿಸಲು ಪೊಲೀಸರು ಮತ್ತು ಅಧಿಕಾರಿಗಳು ಹರಸಾಹಸ ಪಟ್ಟರು.

ADVERTISEMENT
ಪ್ರತಿಭಟನೆಗೆ ಮುಂದಾದವರನ್ನು ಪೊಲೀಸರು ತಡೆದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.