ADVERTISEMENT

ತುರ್ವಿಹಾಳ: ಶಾಲೆ ಪ್ರಯೋಗಾಲಯದ ಬೀಗ ಮುರಿದು 10 ಕಂಪ್ಯೂಟರ್ ಕಳವು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 4:38 IST
Last Updated 9 ಆಗಸ್ಟ್ 2021, 4:38 IST
ತುರ್ವಿಹಾಳ ಸರ್ಕಾರಿ ಪ್ರೌಢಶಾಲೆಗೆ ಸಿಪಿಐ ಹಾಗೂ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು
ತುರ್ವಿಹಾಳ ಸರ್ಕಾರಿ ಪ್ರೌಢಶಾಲೆಗೆ ಸಿಪಿಐ ಹಾಗೂ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ತುರ್ವಿಹಾಳ: ಕಳ್ಳರು ಶನಿವಾರ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಪ್ರಯೋಗಾಲಯದ ಬೀಗ ಮುರಿದು ₹3.5 ಲಕ್ಷ ಮೌಲ್ಯದ 10 ಕಂಪ್ಯೂಟರ್‌ಗಳನ್ನು ಕಳವು ಮಾಡಿದ್ದಾರೆ.

‘ಶುಕ್ರವಾರ ಸಂಜೆ ಕೊಠಡಿಗೆ ಎರಡು ಬೀಗ ಹಾಕಿದ್ದೆವು. ಶನಿವಾರ ಬೆಳಿಗ್ಗೆ 8.30 ಕ್ಕೆ ಶಾಲೆಗೆ ಬಂದಾಗ ಘಟನೆ ನಡೆದಿರುವುದು ತಿಳಿಯಿತು. ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಯಿತು’ ಎಂದು ಮುಖ್ಯ ಶಿಕ್ಷಕ ಸೋಮಲಿಂಗಪ್ಪ ತಿಳಿಸಿದರು.

ಸಿಂಧನೂರು ಸಿಪಿಐ ಉಮೇಶ ಕಾಂಬಳೆ ಹಾಗೂ ತುರ್ವಿಹಾಳ ಪಿಎಸ್ಐ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.