
ರಾಯಚೂರು: ‘ಅಧಿಕಾರ ಶಾಶ್ವತವಲ್ಲ, ಎಲ್ಲಿಯವರೆಗೆ ಹೈಕಮಾಂಡ್ ಇದೆಯೋ ಅಲ್ಲಿಯವರೆಗೆ ಅಧಿಕಾರ ಇರುತ್ತದೆ. ಇಲ್ಲದೇ ಇದ್ದರೆ ಸರ್ಕಾರವೂ ಇರಲ್ಲ, ನನ್ನ ಮಂತ್ರಿ ಸ್ಥಾನವೂ ಇರಲ್ಲ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಶಾಶ್ವತವಲ್ಲ ಎಂದು ಹೇಳಿರುವುದಲ್ಲಿ ವೈರಾಗ್ಯದ ನುಡಿಗಿಳಿಲ್ಲ. ಎಲ್ಲಿಯವರೆಗೆ ಜನರ ಆರ್ಶೀವಾದ ಇರುತ್ತದೆಯೋ ಅಲ್ಲಿಯವರೆಗೆ ಅಧಿಕಾರ ಇರುತ್ತದೆ. ಎಲ್ಲದಕ್ಕೂ ಹೈ ಕಮಾಂಡ್ ತೀರ್ಮಾನವೇ ಅಂತಿಮ’ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಸಚಿವ ಸತೀಶ ಜಾರಕಿಹೊಳೆ ಅವರ ಹೇಳಿಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು. ‘ಸತೀಶ ಅವರನ್ನೇ ಕೇಳಿ’ ಎಂದಷ್ಟೇ ಹೇಳಿದರು.
‘ಬ್ರೆಕ್ ಫಾಸ್ಟ್, ಲಂಚ್ ಮೀಟಿಂಗ್ ಗಳು ನಡೆಯುತ್ತವೆ. ಸಿಎಂ ಮತ್ತು ಡಿಸಿಎಂ ಸೇರಿದಂತೆ ಅನೇಕರು ಮಾಡುತ್ತಾರೆ. ಸರ್ಕಾರ ಸುಸೂತ್ರವಾಗಿ ನಡೆಯುತ್ತಿದೆ. ಯಾರು ಏನೇ ಹೇಳಿದರೂ ಹೈ ಕಮಾಂಡ್ ತೀರ್ಮಾನವೇ ಅಂತಿಮ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.