ಮುದಗಲ್: ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆ ಸಾಮರ್ಥ್ಯದ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಿದ ಹಿನ್ನೆಲೆಯಲ್ಲಿ ₹6.45 ಕೋಟಿ ಮೊತ್ತದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಮಾನಪ್ಪ ವಜ್ಜಲ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು,‘ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಜನರನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ’ ಎಂದರು.
‘ಮುದಗಲ್ ಅನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು, ನಂದವಾಡಗಿ ಏತ ನೀರಾವರಿ ಸೌಲಭ್ಯ ವಂಚಿತ 35 ಗ್ರಾಮಗಳನ್ನು ಸೇರಿಸುವ ಕುರಿತು ಚರ್ಚಿಸಿದರೆ ಹಣವಿಲ್ಲ ಎನ್ನುತ್ತಾರೆ. ಕೆಕೆಆರ್‌ಡಿಬಿ ಒಂದೇ ವರದಾನವಾಗಿದೆ. ಈ ಅನುದಾನದಿಂದಲೇ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ಹೇಳಿದರು..
ಬಿಜೆಪಿ ಮುಖಂಡ ಗಿರಿಮಲ್ಲನಗೌಡ ಕರಡಕಲ್ ಮಾತನಾಡಿದರು.
ಬಿಜೆಪಿ ಮುದಗಲ್ ನಗರ ಘಟಕದ ಅಧ್ಯಕ್ಷ ಕರಿಯಪ್ಪ ಯಾದವ, ಜೀವಲೆಪ್ಪ ನಾಯ್ಕ, ಮಹಾಂತಗೌಡ ಬಯ್ಯಾಪುರ, ಉದಯಕುಮಾರ ಕಮ್ಮಾರ, ಚಂದಾವಲಿ, ಸಣ್ಣ ಸಿದ್ದಯ್ಯ, ನಾಗರಾಜ ತಳವಾರ, ಹುಸೇನ ಸಾಬ್, ಬಾಷಾಸಾಬ್ ಜಂಬಾಳಿ, ಆಡಳಿತ ವೈದ್ಯಾಧಿಕಾರಿ ಚಂದ್ರಕಾಂತ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಬೋಗಾರ, ಮಲ್ಲಪ್ಪ ಹೂಗಾರ, ಮಂಜುನಾಥ ನಂದವಾಡಗಿ ಹಾಗೂ ಈರಣ್ಣ ಕಳ್ಳಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.