ADVERTISEMENT

ರಾಯಚೂರು | ಲೋಕ ಅದಾಲತ್: ಒಂದಾದ ದಂಪತಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 7:49 IST
Last Updated 26 ಜೂನ್ 2022, 7:49 IST
ಮಾನ್ವಿಯಲ್ಲಿ ಶನಿವಾರ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಒಂದಾದ ದಂಪತಿಯನ್ನು ನ್ಯಾಯಾಧೀಶ ಆಶಪ್ಪ ಬಿ ಸಣ್ಣಮನಿ ಮತ್ತಿತರರು ಸನ್ಮಾನಿಸಿದರು
ಮಾನ್ವಿಯಲ್ಲಿ ಶನಿವಾರ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಒಂದಾದ ದಂಪತಿಯನ್ನು ನ್ಯಾಯಾಧೀಶ ಆಶಪ್ಪ ಬಿ ಸಣ್ಣಮನಿ ಮತ್ತಿತರರು ಸನ್ಮಾನಿಸಿದರು   

ಮಾನ್ವಿ: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ಮೆಗಾ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ದೂರವಾಗಿದ್ದ ದಂಪತಿ ಮತ್ತೆ ಒಂದಾಗಿದ್ದಾರೆ.

ಸಿರವಾರ ತಾಲ್ಲೂಕಿನ ಎನ್.ಹೊಸೂರು ಗ್ರಾಮದ ರೇಣುಕಾ ಹಾಗೂ ದೇವದುರ್ಗ ತಾಲ್ಲೂಕಿನ ಮುಕನಾಳ ಗ್ರಾಮದ ನಾಗಪ್ಪ ಒಂದಾದ ದಂಪತಿ.

ಅವರು 2006ರಿಂದ ಕೌಟುಂಬಿಕ ಕಲಹಗಳಿಂದ ನ್ಯಾಯಾಲಯದ ಮೊರೆ ಹೋಗಿ, 6 ವರ್ಷಗಳಿಂದ ಪರಸ್ಪರ ದೂರವಾಗಿದ್ದರು. ನ್ಯಾಯಾಧೀಶರ ಸಲಹೆ ಮೇರೆಗೆ ದಂಪತಿ ಪರಸ್ಪರ ರಾಜಿಯಾದರು. ಒಂದಾದ ದಂಪತಿಯನ್ನು ನ್ಯಾಯಾಧೀಶ ಆಶಪ್ಪ ಬಿ.ಸಣ್ಣಮನಿ ಸನ್ಮಾನಿಸಿ ಗೌರವಿಸಿದರು.

ADVERTISEMENT

ಪೊಲೀಸ್ ಅಧಿಕಾರಿಗಳು, ವಕೀಲರ ಸಂಘದ ವತಿಯಿಂದ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು

ಸಹಾಯಕ ಸರ್ಕಾರಿ ಅಭಿಯೋಜಕಿ ಅರ್ಚನಾ ಯಾದವ್, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಕಾರ್ಯದರ್ಶಿ ರವಿಕುಮಾರ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.