ADVERTISEMENT

ದೇವದುರ್ಗ | ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:15 IST
Last Updated 16 ನವೆಂಬರ್ 2025, 5:15 IST
ದೇವದುರ್ಗ ಪಟ್ಟಣದ ನೂತನ ನ್ಯಾಯಲಯ ಸಂಕೀರ್ಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಉದ್ಘಾಟಿಸಿ ಮಾತನಾಡಿದರು.
ದೇವದುರ್ಗ ಪಟ್ಟಣದ ನೂತನ ನ್ಯಾಯಲಯ ಸಂಕೀರ್ಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಉದ್ಘಾಟಿಸಿ ಮಾತನಾಡಿದರು.   

ದೇವದುರ್ಗ: ‘ನ್ಯಾಯಾಂಗ ವ್ಯವಸ್ಥೆಗೆ ಕಾಲ ಕಳೆದಂತೆ ತನ್ನದೇ ಸೌಕರ್ಯಗಳ ಅಗತ್ಯವಿದೆ. ಅತ್ಯಾಧುನಿಕ ನ್ಯಾಯಲಯ ಸಂಕೀರ್ಣದ ಅವಶ್ಯಕತೆಯಿತ್ತು. ಅದನ್ನು ಮನಗಂಡ ರಾಜ್ಯ ಸರ್ಕಾರ ನೂತನ ಕಟ್ಟಡ ನಿರ್ಮಿಸಿ, ತನ್ನ ಬದ್ಧತೆ ತೋರಿಸಿದೆ’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಿರ್ಮಿಸಿರುವ ನೂತನ ನ್ಯಾಯಾಲಯಗಳ ಸಂಕೀರ್ಣವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ದೇವದುರ್ಗದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ನ್ಯಾಯಾಲಯ ಕಟ್ಟಡವು ಮಾದರಿ ನ್ಯಾಯಾಲಯ ಸಂಕೀರ್ಣವಾಗಿದೆ. ಕಟ್ಟಡವಿಂದು ಲೋಕಾರ್ಪಣೆ ಆಗಿರುವುದು ಐತಿಹಾಸಿಕ ಕ್ಷಣವಾಗಿದೆ. ನೂತನ ಕಟ್ಟಡವು ವಕೀಲರು, ನ್ಯಾಯಾಧೀಶರು, ಕಕ್ಷಿದಾರರು ಹಾಗೂ ಸಾರ್ವಜನಿಕರಿಗೆ ಬೇಕಾದ ಅತ್ಯುತ್ತಮ ಸೌಕರ್ಯಗಳನ್ನು ಹೊಂದಿದೆ’ ಎಂದು ಹೇಳಿದರು.

ಕರ್ನಾಟಕ ಗಡಿ ಮತ್ತು ನದಿ ಸಂರಕ್ಷಣಾ ಆಯೋಗ ಅಧ್ಯಕ್ಷ ಹಾಗೂ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾ. ಶಿವರಾಜ ವಿ. ಪಾಟೀಲ ಮಾತನಾಡಿ, ‘ನ್ಯಾಯ ಬಯಸಿ ಬಂದ ಜನರಿಗೆ ನ್ಯಾಯ ದೊರಕಿಸುವ ಕೆಲಸ ವಕೀಲರಿಂದ ಆಗಲಿ. ದೇಶದಲ್ಲಿಯೇ ರಾಜ್ಯದ ನ್ಯಾಯಾಂಗ ವ್ಯವಸ್ಥೆಯ ಮೂಲ ಸೌಕರ್ಯ ಉತ್ತಮ ಗುಣಮಟ್ಟದಿಂದ ಕೂಡಿದೆ’ ಎಂದು ಹೇಳಿದರು.

ADVERTISEMENT

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಾರುತಿ ಬಾಗಡೆ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಮಿಟ್ಟಲಕೋಡ ಎಸ್.ಎಸ್., ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶ ಎಚ್.ಎ. ಸಾತ್ವಿಕ, ದೇವದುರ್ಗ ನ್ಯಾಯಾಧೀಶ ಸುರೇಶ ಅಪ್ಪಣ್ಣ ಸೌದಿ, ರಫಿಕ್ ಅಹ್ಮದ್ ವಕೀಲರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಕೆಎಸ್‌ಎಲ್‌ಎಸ್‌ಎ ಉಪ ಕಾರ್ಯದರ್ಶಿ ಶ್ರೀಧರ ಎಂ., ದೇವದುರ್ಗ ವಕೀಲರ ಸಂಘದ ಅಧ್ಯಕ್ಷ ಶುಕುಮುನಿರೆಡ್ಡಿ ನಾಯಕ, ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಗೆಜ್ಜೆಬಾವಿ, ಲೋಕೋಪಯೋಗಿ ಇಲಾಖೆ ಇಇ ವೆಂಕಟೇಶ ಗಲಗ, ವಕೀಲರಾದ ವಿ.ಎಂ.ಮೇಟಿ, ವೇಣುಗೋಪಾಲ ಪಾಟೀಲ ಜಾಲಹಳ್ಳಿ, ಪ್ರಕಾಶ ಅಬಕಾರಿ, ಶರಣಬಸವ ಪಾಟೀಲ, ಬಸವರಾಜ ಎಸ್., ಹನುಮಂತರಾಯ ಚಿಂತಲಕುಂಟ ಬಸವರಾಜ ಗಾಣದಾಳ, ಬಸನಗೌಡ ದೇಸಾಯಿ ಭಾಗವಹಿಸಿದ್ದರು.

ದೇವದುರ್ಗ ಪಟ್ಟಣದ ನೂತನ ನ್ಯಾಯಲಯ ಸಂಕೀರ್ಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಉದ್ಘಾಟಿಸಿದರು.