ADVERTISEMENT

ಮುದಗಲ್‌: ಜವಾಹರ ನವೋದಯ ವಿದ್ಯಾಲಯದಲ್ಲಿ 40 ಜನಕ್ಕೆ ಕೋವಿಡ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 4:56 IST
Last Updated 25 ಜನವರಿ 2022, 4:56 IST
ಮುದಗಲ್ ಸಮೀಪದ ಕನ್ನಾಪುರ ಹಟ್ಟಿ ಜವಾಹರ ನವೋದಯ ವಿದ್ಯಾಲಯವನ್ನು ಬಂದ್‌ ಮಾಡಲಾಗಿದೆ
ಮುದಗಲ್ ಸಮೀಪದ ಕನ್ನಾಪುರ ಹಟ್ಟಿ ಜವಾಹರ ನವೋದಯ ವಿದ್ಯಾಲಯವನ್ನು ಬಂದ್‌ ಮಾಡಲಾಗಿದೆ   

ಮುದಗಲ್: ‘ಸಮೀಪದ ಜವಾಹರ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಒಟ್ಟು 40 ಜನರಿಗೆ ಕೋವಿಡ್ ದೃಢಪಟ್ಟಿದೆ’ ಎಂದು ಮಾಕಾಪುರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿರೂಪಾಕ್ಷಪ್ಪ ತಿಳಿಸಿದರು.

10 ಸಿಬ್ಬಂದಿ 30 ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿದ ಕಾರಣ ಶಾಲೆಗೆ ಜಿಲ್ಲಾಧಿಕಾರಿ ಜ.31 ರವರೆಗೆ ರಜೆ ಘೋಷಿಸಿದ್ದಾರೆ.

ಈ ವಿದ್ಯಾಲಯದಲ್ಲಿ ಒಟ್ಟು 465 ವಿದ್ಯಾರ್ಥಿಗಳಿದ್ದು, 180 ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

ADVERTISEMENT

ಸೋಂಕಿತ ವಿದ್ಯಾರ್ಥಿಗಳನ್ನು ಪಾಲಕರೊಂದಿಗೆ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಪ್ರಾಂಶುಪಾಲ ಬಸವರಾಜ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.