ADVERTISEMENT

ಮತ ಎಣಿಕೆ: ಏಜೆಂಟರಿಗೆ ಕೋವಿಡ್ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 11:18 IST
Last Updated 28 ಏಪ್ರಿಲ್ 2021, 11:18 IST
ಕೋವಿಡ್‌ ಪರೀಕ್ಷೆ
ಕೋವಿಡ್‌ ಪರೀಕ್ಷೆ   

ಮಸ್ಕಿ: ಮೇ 2 ರಂದು ನಡೆಯಲಿರುವ ಮಸ್ಕಿ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ 118 ಏಜೆಂಟರುಗಳ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಕೋವಿಡ್‌ ಪರೀಕ್ಷೆಗೆ ಕಳುಹಿಸಲಾಯಿತು.

ಚುನಾವಣಾಧಿಕಾರಿ ರಾಜಶೇಖರ ಡಂಬಳ ಅವರ ಸೂಚನೆಯಂತೆ ಡಾ. ಮೌನೇಶ ನೇತೃತ್ವದ ಆರೋಗ್ಯ ಇಲಾಖೆ ತಂಡ ಪಟ್ಟಣದ ದೇವನಾಂಪ್ರಿಯ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಮಾದರಿ ಸಂಗ್ರಹಿಸಿತು.

ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ತುರವಿಹಾಳ ಸೇರಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ಪ್ರಮುಖರು ಪಾಲ್ಗೊಂಡಿದ್ದರು.

ADVERTISEMENT

‘ಮೇ.1 ರ ಒಳಗೆ (ಶನಿವಾರ) 118 ಜನರ ಕೋವಿಡ್ ವರದಿ ಬರಲಿದೆ’ ಎಂದು ಡಾ.ಮೌನೇಶ ತಿಳಿಸಿದರು.

‘ಸೋಂಕು ದೃಢಪಡದವರನ್ನು ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಕಳುಹಿಸಲಾಗುವುದು’ ಎಂದು ಚುನಾವಣಾಧಿಕಾರಿ ರಾಜಶೇಖರ ಡಂಬಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.