ಜಾಲಹಳ್ಳಿ: ಮುದಗೋಟ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಳಿಯ ಹೊಲದಲ್ಲಿ ಶನಿವಾರ ರಾತ್ರಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
ಹಿಂದೆ ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಾಣದ ಸಂದರ್ಭದಲ್ಲಿ ಬೆಟ್ಟದ ಪಕ್ಕದಲ್ಲಿ ಮಣ್ಣು ತೋಡಿದ ಕಾರಣ ದೊಡ್ಡ ಪ್ರಮಾಣದ ಹೊಂಡ ನಿರ್ಮಾಣವಾಗಿದೆ. ಅದರಲ್ಲಿಯೇ ಅನೇಕ ದಿನಗಳಿಂದ ವಾಸವಾಗಿರುವ ಮೊಸಳೆ ಈಗ ಪ್ರತ್ಯಕ್ಷವಾಗಿದೆ.
ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಲಾಗಿದೆ.
ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸೇರಿ ಮೊಸಳೆ ಸೆರೆ ಹಿಡಿಯಲಾಗಿದೆ.
ಅರಣ್ಯಾಧಿಕಾರಿ ಬಸವರಾಜ, ಪಿಎಸ್ಐ ವೈಶಾಲಿ ಝಳಕಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.