ADVERTISEMENT

ಹರ್ ಘರ್ ತಿರಂಗಾ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 13:38 IST
Last Updated 11 ಆಗಸ್ಟ್ 2022, 13:38 IST
ಎಲ್‌.ಚಂದ್ರಶೇಖರ್‌ ನಾಯಕ
ಎಲ್‌.ಚಂದ್ರಶೇಖರ್‌ ನಾಯಕ   

ರಾಯಚೂರು: ದೇಶದಾದ್ಯಂತ 75ರ ಸ್ವಾತಂತ್ರ‍್ಯದ ಸಂಭ್ರಮದ ಪ್ರಯುಕ್ತ ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಎಂಬ ಘೋಷ ವಾಕ್ಯದೊಂದಿಗೆ ಇದೇ ಆಗಸ್ಟ್‌ 13ರಿಂದ 15ರವರೆಗೆ ದೇಶದ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿಯನ್ನು ಅಭಿವ್ಯಕ್ತಗೊಳಿಸಲು ಹರ್ ಘರ್ ತಿರಂಗಾ ಅಭಿಯಾನವನ್ನು ಆಯೋಜಿಸಿದ್ದು, ಜಿಲ್ಲೆಯ ಎಲ್ಲಾ ನಾಗರಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ಗ್ರಾಮದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ ಹಾಗೂ ನಗರಸಭೆ ಕಚೇರಿಯಲ್ಲಿ, ಅಂಚೆ ಕಚೇರಿಯಲ್ಲಿ ರಾಷ್ಟçಧ್ವಜಗಳನ್ನು ನೀಡಲಾಗುತ್ತಿದೆ ಎಂದರು.

ಸರ್ಕಾರ ನಿಗಧಿಪಡಿಸಿರುವ ₹22 ದರದಲ್ಲಿ ರಾಷ್ಟ್ರಧ್ವಜಗಳನ್ನು ಭಾರತ ಸರ್ಕಾರದ ಗೃಹ ವ್ಯವಹಾರಗಳ ಮಂತ್ರಾಲಯದ ದಿ-ಪ್ಲಾಗ್ ಕೋಡ್ ಆಫ್ ಇಂಡಿಯಾ 2022 (ತಿದ್ದುಪಡಿ-2021) ಅನುಸರಿಸಿ ತಮ್ಮ ತಮ್ಮ ಮನೆ ಅಂಗಳದಲ್ಲಿ ಧ್ವಜವನ್ನು ಆರಿಸಿ ಹರ್ ಘರ್ ತಿರಂಗ್ ಅಭಿಯಾನವನ್ನು ಯಶ್ವಸಿಗೊಳಿಸಬೇಕು ಎಂದು ಹೇಳಿದರು.

ADVERTISEMENT

ಆಗಸ್ಟ್ 13ರಿಂದ 15ರವರೆಗೆ ಸರ್ಕಾರಿ ಕಟ್ಟಡಗಳ ಮೇಲೆ ಬೆಳಿಗ್ಗೆ 8ಗಂಟೆಗೆ ಧ್ವಜರೋಹಣ ಮಾಡಿ ಸಂಜೆ ಸೂರ್ಯಾಸ್ತಕ್ಕೆ ಧ್ವಜ ಇಳಿಸಲಾಗುವುದು. ಅಲ್ಲದೆ ಮನೆಗಳ ಮೇಲೆ ಆಗಸ್ಟ್ 13ರ ಬೆಳಿಗ್ಗೆ ಧ್ಜಾಜರೋಹಣ ಮಾಡಿ ಆಗಸ್ಟ್ 15ರ ಸೂರ್ಯಾಸ್ತದವರೆಗೆ ಹಗಲು ರಾತ್ರಿ ನಿರಂತರವಾಗಿ ಧ್ವಜ ಹಾರಾಡುವಂತೆ ಜಾಗೃತಿ ಮೂಡಿಸಿ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಕ್ರಮ ವಹಿಸಲಾಗಿದೆ ಎಂದರು.

ಈಗಾಗಲೇ ಸರ್ಕಾರದಿಂದ 1,10,000 ಧ್ವಜಗಳು, ಸ್ವಸಹಾಯ ಗುಂಪುಗಳಿಂದ ತಯಾರಿಸಿದ 1,55,000 ಧ್ವಜಗಳು, ನಗರಾಭಿವೃದ್ಧಿ ಕೋಶದಿಂದ 60 ಸಾವಿರ ಧ್ವಜಗಳು, ಅಂಚೆ ಕಚೇರಿಯಿಂದ 9 ಸಾವಿರ ಧ್ವಜಗಳು ಸೇರಿದಂತೆ ಒಟ್ಟು 3,34,000 ಧ್ವಜಗಳ ಮಾರಾಟ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಪ್ರಮುಖ ಬೀದಿಗಳಲ್ಲಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಹರ್ ಘರ್ ತಿರಂಗಾ ಬ್ಯಾನರಗಳನ್ನು ಅಳವಡಿಸಿ ಪ್ರಚಾರ ಮಾಡಲಾಗುತ್ತಿದ್ದು, ಆಯ್ದ ಸ್ಥಳಗಳಲ್ಲಿ ಹರ್ ಘರ್ ತಿರಂಗಾ ಪ್ರೇಮ್‌ಗಳನ್ನು ಅಳವಡಿಸಲಾಗಿದೆ ಎಂದರು.

ಹರ್ ಘರ್ ತಿರಂಗಾ ಅಭಿಯಾನವನ್ನು ಯಶ್ವಸಿಯಾಗಿಸುವ ನಿಟ್ಟಿನಲ್ಲಿ ಮತ್ತು 75ನೇ ಸ್ವಾತಂತ್ರ‍್ಯ ಅಮೃತಮಹೋತ್ಸವನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳಿದರು.

ರಕ್ತದಾನ ಶಿಬಿರ: 75ನೇ ಸ್ವಾತಂತ್ರ‍್ಯದ ಆಜಾದಿಕಾ ಅಮೃತ್ ಮಹೋತ್ಸವದ ಅಂಗವಾಗಿ ಇದೇ ಆಗಸ್ಟ್‌ 15ರಂದು ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ., ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು, ನೌಕರ ಬಾಂಧವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲಿದ್ದಾರೆ ಎಂದರು ತಿಳಿಸಿದರು.

ರಕ್ತದಾನ ಶಿಬಿರದಲ್ಲಿ ಕನಿಷ್ಠ 750ರಿಂದ 1000ಯೂನಿಟ್ಸ್ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ.ಪಾಟೀಲ ಮುನೇನಕೊಪ್ಪ ಉದ್ಘಾಟಸಲಿದ್ದು, ಜಿಲ್ಲೆಯ ಸಮಸ್ತ ನೌಕರ ಭಾಂಧವರು ಈ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.