ADVERTISEMENT

ಸಾವಿನಲ್ಲೂ ಸಾರ್ಥಕತೆ ಮೆರೆದ ಬಸ್ಸಣ್ಣ ಸಿರವಾರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 5:10 IST
Last Updated 17 ಜುಲೈ 2025, 5:10 IST
ಬಸ್ಸಣ್ಣ ಸಿರವಾರ
ಬಸ್ಸಣ್ಣ ಸಿರವಾರ   

ಮಸ್ಕಿ: ಸಾವಿನ ಬಳಿಕ ತನ್ನ ದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡುವ ಮೂಲಕ ಸ್ಥಳೀಯ ನಿವಾಸಿ, ಜಲ ಸಂಪನ್ಮೂಲ ಇಲಾಖೆಯ ನಿವೃತ್ತ ನೌಕರ ಬಸ್ಸಣ್ಣ ಸಿರವಾರ ಸಾರ್ಥಕತೆ ಮೆರೆದಿದ್ದಾರೆ.

ಕೆಲ ದಿ‌ನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಸ್ಸಣ್ಣ ಸಿರವಾರ (89) ಅವರನ್ನು  ಬೆಂಗಳೂರಿನಲ್ಲಿರುವ ಅವರ ಪುತ್ರ ಎಸ್.ಮಲ್ಲಿಕಾರ್ಜುನ ಅವರು ವಾರದ ಹಿಂದೆಯಷ್ಟೇ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.

ಜು.15 ರಂದು (ಮಂಗಳವಾರ) ಅವರು‌ ಮೃತಪಟ್ಟಿದ್ದಾರೆ. ಸಾವಿನ ನಂತರ ತನ್ನ ಮೃತ ದೇಹವನ್ನು ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿಗೆ ನೀಡುವಂತೆ ಬಸ್ಸಣ್ಣ ಸಿರವಾರ ಹೇಳಿದ್ದರು.

ADVERTISEMENT

ಬೆಂಗಳೂರಿನಲ್ಲಿ ನಿಧನರಾಗಿದ್ದರಿಂದ ಅವರ ಕುಟುಂಬಸ್ಥರು ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಜತೆ ಚರ್ಚಿಸಿ ತಂದೆಯ ಆಸೆಯಂತೆ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿಗೆ ಮೃತ ದೇಹವನ್ನು ಹಸ್ತಾಂತರಿಸಲಾಗಿದೆ ಎಂದು ಅವರ ಪುತ್ರ ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಮೃತರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.