ADVERTISEMENT

ಮಾನ್ವಿ | ನೋಂದಣಿ ವಿಳಂಬ: ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2023, 5:08 IST
Last Updated 24 ಸೆಪ್ಟೆಂಬರ್ 2023, 5:08 IST
ಮಾನ್ವಿ ಪಟ್ಟಣದ ಹಿರಿಯ ಉಪನೋಂದಣಾಧಿಕಾರಿ ಕಚೇರಿಯ ಹೊರನೋಟ
ಮಾನ್ವಿ ಪಟ್ಟಣದ ಹಿರಿಯ ಉಪನೋಂದಣಾಧಿಕಾರಿ ಕಚೇರಿಯ ಹೊರನೋಟ   

ವರದಿ: ಬಸವರಾಜ ಭೋಗಾವತಿ

ಮಾನ್ವಿ: ಸ್ಥಳೀಯ ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಸಿದ ನಂತರ ನೋಂದಣಿ ಕಾರ್ಯ ವಿಳಂಬವಾಗುತ್ತಿದೆ.

ಸುಮಾರು ನಾಲ್ಕೈದು ತಿಂಗಳಿನಿಂದ 11ಇ ನಕಾಶೆ ಮೂಲಕ ಮಾಡಿದಂತಹ ನೋಂದಣಿಗಳ ಪಹಣಿಯಲ್ಲಿ ಹೆಸರು ಬದಲಾವಣೆ ಆಗುತ್ತಿಲ್ಲ. ಆದರೆ ಫಾರಂ 10 ಮೂಲಕ ಮಾಡಿದಂತಹ ನೋಂದಣಿಗಳಿಗೆ ಮಾತ್ರ ಹೆಸರು ಬದಲಾವಣೆಯಾದ ಪಹಣಿ ದಾಖಲೆ ಸಿಗುತ್ತಿದೆ.

ADVERTISEMENT

ಈ ಹಿಂದೆ ಕಾವೇರಿ 1.0 ತಂತ್ರಾಂಶ ಇದ್ದಾಗ ವೈ-ಸೇವ್ಡ್ ಪ್ರತಿ, ಜೆ-ಫಾರಂ ತೋರಿಸಿದರೆ ತಹಶೀಲ್ದಾರ್ ಕಚೇರಿಯಲ್ಲಿ ದಸ್ತಾವೇಜು ನೋಂದಣಿಯಾಗಿರುವುದು ತೋರಿಸುತ್ತಿತ್ತು. ಕಾವೇರಿ 2.0 ತಂತ್ರಾಂಶ ಅಳವಡಿಸಿದಾಗಿನಿಂದ ವೈ-ಸೇವ್ಡ್ ಪ್ರತಿ ಮತ್ತು ಜೆ-ಫಾರಂ ದೊರಕುತ್ತಿಲ್ಲ. ಇಸಿ, ಸಿಎ ಪ್ರತಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದಾಗ ದಸ್ತಾವೇಜಿನ ನೋಂದಣಿ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಯಂ ಹಿರಿಯ ಉಪನೋಂದಣಾಧಿಕಾರಿ ನೇಮಕ ನೋಂದಣಿ ವಿಳಂಬ ಕುರಿತು ಮೇಲಧಿಕಾರಿಗಳು ಗಮನ ಹರಿಸಬೇಕು.
ಪಿ.ರವಿಕುಮಾರ, ವಕೀಲ, ಮಾನ್ವಿ

ಕಾವೇರಿ 2.0 ತಂತ್ರಾಂಶ ಅಳವಡಿಕೆ ಮೊದಲು ಈ ಕಚೇರಿಯಲ್ಲಿ ಪ್ರತಿ ದಿನ ಸರಾಸರಿ 100ರಿಂದ 120 ನೋಂದಣಿಗಳು ಆಗುತ್ತಿದ್ದವು. ಈಗ ಕಾವೇರಿ 2.0 ತಂತ್ರಾಂಶದ ಸರ್ವರ್ ಸಮಸ್ಯೆಯಿಂದಾಗಿ ಪ್ರತಿ ದಿನ ಸರಾಸರಿ 60ರಿಂದ 170 ನೋಂದಣಿ ಮಾತ್ರ ಸಾಧ್ಯವಾಗುತ್ತಿದೆ. ನೋಂದಣಿಯಲ್ಲಿನ ವಿಳಂಬ, ತಂತ್ರಾಂಶ ದೋಷಗಳಿಂದಾಗಿ ಕಚೇರಿಯ ದಾಖಲಾತಿಗಳಿಗಾಗಿ ಖರೀದಿದಾರರು, ಸಾರ್ವಜನಿಕರು, ರೈತರು ಉಪ ನೋಂದಣಾಧಿಕಾರಿ ಕಚೇರಿಗೆ ಅಲೆದಾಡುವುದು ಸಾಮಾನ್ಯವಾಗಿದೆ.

ಹೊಸದಾಗಿ ಕಾವೇರಿ 2.0 ತಂತ್ರಾಂಶ ಅಳವಡಿಕೆಯಿಂದಾಗಿ ನೋಂದಣಿಯಲ್ಲಿ ವಿಳಂಬ ಸಮಸ್ಯೆ ಆಗುತ್ತಿದೆ.
ಸುರೇಶ, ಪ್ರಭಾರ ಹಿರಿಯ ಉಪನೋಂದಣಾಧಿಕಾರಿ, ಮಾನ್ವಿ

‘ಉಪನೋಂದಣಾಧಿಕಾರಿ ಹುದ್ದೆ ಖಾಲಿ: ರಾಯಚೂರಿನ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಎಸ್.ಡಿ.ಎ ಹುದ್ದೆಯ ವ್ಯಕ್ತಿಗೆ ಮಾನ್ವಿ ಕಚೇರಿಯ ಹಿರಿಯ ಉಪ ನೋಂದಣಾಧಿಕಾರಿ ಹುದ್ದೆಯ ಪ್ರಭಾರ ಜವಾಬ್ದಾರಿ ನೀಡಲಾಗಿದೆ. ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಕಂಪ್ಯೂಟರ್ ಆಪರೇಟರ್‌ಗಳ ಕಾರಬಾರು ಹೆಚ್ಚಾಗಿದೆ’ ಎಂಬುದು ಸ್ಥಳೀಯರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.