ರಾಯಚೂರು: ‘ರಾಷ್ಟ್ರದ ಸುರಕ್ಷತೆ ಹಾಗೂ ರಕ್ಷಣೆ ವಿಷಯವಾಗಿ ಚರ್ಚಿಸಲು ಸಂಸತ್ ವಿಶೇಷ ಅಧಿವೇಶನ ಕರೆಯಬೇಕು’ ಎಂದು ಸಂಸದ ಜಿ.ಕುಮಾರ ನಾಯಕ ಆಗ್ರಹಿಸಿದ್ದಾರೆ.
‘ಪಹಲ್ಗಾಮ್‌ನಲ್ಲಿ ನಡೆದ ದಾಳಿ ಮತ್ತು ಆಪರೇಷನ್ ಸಿಂಧೂರದ ಕುರಿತು ಕೇಂದ್ರದ ಸಚಿವರು, ವಿವಿಧ ಪಕ್ಷಗಳ ನಾಯಕ, ಗಣ್ಯರು ಸಾರ್ವಜನಿಕವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ, ಸಂಸತ್ತಿನಲ್ಲಿ ಗಂಭೀರವಾಗಿ ಚರ್ಚೆಗೆ ಅವಕಾಶ ಕಲ್ಪಿಸಿಲ್ಲ’ ಎಂದು ಹೇಳಿದ್ದಾರೆ.
‘ಭಾರತದ ಸಂಸತ್ ಕೇವಲ ಇಟ್ಟಿಗೆ ಮತ್ತು ಕಲ್ಲಿನ ಕಟ್ಟಡವಲ್ಲ. ಅದು ನಮ್ಮ ಪ್ರಜಾಪ್ರಭುತ್ವದ ಪವಿತ್ರ ಆಲಯ. 140 ಕೋಟಿ ಭಾರತೀಯರ ಚುನಾಯಿತ ಪ್ರತಿನಿಧಿಗಳ ಕೇಂದ್ರವಾಗಿದೆ. ಇದು ಭಾರತೀಯರ ಧ್ವನಿಯನ್ನು ಪ್ರತಿನಿಧಿಸುವ ಮನೆಯಾಗಿದೆ. ಇದು ಮೂಕವಾಗಬಾರದು’ ಎಂದು ತಿಳಿಸಿದ್ದಾರೆ.
‘ರಾಜ್ಯಕ್ಕೆ ಸ್ಪಷ್ಟತೆ, ಭರವಸೆ ಮತ್ತು ಏಕತೆಯ ಸಂದೇಶ ಬೇಕಾಗಿರುವ ಈ ಸಮಯದಲ್ಲಿ ಸಂಸತ್ತು ಮೌನವಾಗಿರುವುದು ಸರಿಯಲ್ಲ’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.