ರಾಯಚೂರು: ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಬುಧವಾರ 1140ನೇ ದಿನಕ್ಕೆ ಪದಾರ್ಪಣೆ ಮಾಡಿದೆ.
ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಗೌರವ ನೀಡಿ, ಏಮ್ಸ್ ಆರೋಗ್ಯ ಸಂಸ್ಥೆಗಾಗಿ ನಡೆಯುತ್ತಿರುವ ಸುಧೀರ್ಘ ಹೋರಾಟಕ್ಕೆ ಸ್ಪಂದಿಸಿ ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಬಸವರಾಜ ಕಳಸ, ಅಶೋಕಕುಮಾರ ಜೈನ್, ವಕೀಲ ಎಸ್. ಮಾರೆಪ್ಪ, ಜಾನ್ ವೆಸ್ಲಿ, ನರಸಪ್ಪ ಬಾಡಿಯಲ್, ಕಾಮರಾಜ ಪಾಟೀಲ, ವೀರಭದ್ರಯ್ಯ ಸ್ವಾಮಿ, ಶ್ರೀನಿವಾಸ ನಾಗಲದಿನ್ನಿ, ಜೈ ಭೀಮ್, ವಿನಯ ಕುಮಾರ ಚಿತ್ರಗಾರ, ಜಗದೀಶ ಪೂರತಿಪ್ಲಿ, ಎಸ್.ಎಸ್. ಪಾಟೀಲ, ಶ್ರೀನಿವಾಸ ಆಚಾರ್ ಜೋಶಿ, ರಮೇಶರಾವ್ ಕಲ್ಲೂರ್ಕರ್, ಶರಣಪ್ಪ ಅಸ್ಕಿಹಾಳ, ಅಮರೇಗೌಡ ಪಾಟೀಲ, ಮೆಹಬೂಬ್ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.