ರಾಯಚೂರು: ತಾಲ್ಲೂಕಿನ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸ್ಥಾವರದಲ್ಲಿ
ನಡೆಯುತ್ತಿರುವ ಸ್ಯಾಂಡ್ ಬ್ಲಾಸ್ಟಿಂಗ್ ಹಾಗೂ ಎಪಾಕ್ಸ್ ಪೇಂಟಿಂಗ್ ಕಾಮಗಾರಿಯಿಂದ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ ಜಯ ಕರ್ನಾಟಕ ಪದಾಧಿಕಾರಿಗಳು ಆರ್‌ಟಿಪಿಎಸ್ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
‘ಎಸ್‌ಪ್ರಿನ್ಸ್ ಹೈಟೆಕ್ ಪ್ರೈವೆಟ್ ಲಿಮಿಟೆಡ್, ಮುಂಬೈ, ಕಂಪನಿಗೆ ₹130 ಕೋಟಿ ಒಂದೇ ಕಾಮಗಾರಿಯನ್ನು ನಾಲ್ಕು ಕಾಮಗಾರಿಗಳಾಗಿ ಗುತ್ತಿಗೆ ನೀಡಿರುವುದು ಹಾಗೂ ಅಂದಾಜು ವೆಚ್ಚ ಪಟ್ಟಿಯಂತೆ ಕಾಮಗಾರಿ ಮಾಡದೆ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದು, ಇದರಿಂದ ಕೆಪಿಸಿಎಲ್ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟವಾಗಿದೆ’ ಎಂದು ಆರೋಪಿಸಿದರು.
‘ತಕ್ಷಣ ಕಾಮಗಾರಿ ತಡೆಹಿಡಿದು ಯಾವುದೇ ಬಿಲ್ ಪಾವತಿ ಮಾಡಬಾರದು. ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಜತೆಗೆ ಸಂಸ್ಥೆಗೆ ಆದ ಆರ್ಥಿಕ ನಷ್ಟ ಅಧಿಕಾರಿಗಳಿಂದ ಮರಳಿ ಪಡೆಯಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಯಾದವ, ಸುರೇಶ ಮಡಿವಾಳ, ರಾಜ ಸಾಬ್, ಪ್ರಕಾಶ, ಯಲ್ಲನಗೌಡ, ಕರುಣಾಕರ ರೆಡ್ಡಿ, ನರಸಪ್ಪ, ಕಿರಣ ಮುರಾರಿ ಪ್ರತಿಭಟನೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.