ADVERTISEMENT

‘ವಚನಗಳಿಂದ ಸಮಾಜ ತಿದ್ದಿದ ಸಂತ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 11:14 IST
Last Updated 17 ಏಪ್ರಿಲ್ 2021, 11:14 IST
ಸಿರವಾರದಲ್ಲಿ ಶನಿವಾರ ನೇಕಾರರ ಒಕ್ಕೂಟದ ತಾಲ್ಲೂಕು ಘಟಕದಿಂದ ಜೇಡರ (ದೇವರ) ದಾಸಿಮಯ್ಯ ಜಯಂತಿ ಆಚರಿಸಲಾಯಿತು
ಸಿರವಾರದಲ್ಲಿ ಶನಿವಾರ ನೇಕಾರರ ಒಕ್ಕೂಟದ ತಾಲ್ಲೂಕು ಘಟಕದಿಂದ ಜೇಡರ (ದೇವರ) ದಾಸಿಮಯ್ಯ ಜಯಂತಿ ಆಚರಿಸಲಾಯಿತು   

ಸಿರವಾರ: ‘ಸಮಾಜದ ಮಾನ ಮುಚ್ಚುವ ಬಟ್ಟೆ ನೇಯ್ಗೆ ಕೆಲಸದ ಜೊತೆಗೆ ವಚನಗಳನ್ನು ರಚಿಸಿ ಆ ಮೂಲಕ ಸಮಾಜವನ್ನು ತಿದ್ದಿ ನೇಕಾರ ಸಮಾಜವನ್ನು ಏಳ್ಗೆಯತ್ತಾ ಕೊಂಡೊಯ್ದ ಮಹಾನ್ ಸಂತ ಜೇಡರ (ದೇವರ) ದಾಸಿಮಯ್ಯ ಅವರು‘ ಎಂದು ನೇಕಾರ ಒಕ್ಕೂಟದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಈರಣ್ಣ ಗಾಳಿ ಅತ್ತನೂರು ಹೇಳಿದರು.

ಪಟ್ಟಣದ ತೇಜಸ್ ಮಾಲ್‌ನಲ್ಲಿ ನೇಕಾರ ಒಕ್ಕೂಟದ ತಾಲ್ಲೂಕು ಘಟಕದಿಂದ ದಾಸಿಮಯ್ಯ ಜಯಂತಿ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖಂಡ ಉಮಾಪತಿ ಚುಕ್ಕಿ, ಡಾ.ಸುನೀಲ್ ಸರೋದೆ ಜೇಡರ (ದೇವರ) ದಾಸಿಮಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ADVERTISEMENT

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು.

ನೇಕಾರ ಸಮಾಜದ ಮುಖಂಡರಾದ ಷಣ್ಮುಖಪ್ಪ ಮಸ್ಕಿ, ಡಾ.ನಾರಾಯಣ ಕೊಂಗಾರಿ, ಡಾ.ಅಶ್ವಥನಾರಾಯಣ, ಶಿವಕುಮಾರ ಗುಡ್ಡದಮನಿ, ಉಮೇಶ ಜೇಗರಕಲ್, ರಾಚಪ್ಪ ಬೋನಗಿರಿ, ರವಿಕುಮಾರ ಕೋಟಾ, ಶಂಕರ ಜೇಗರಕಲ್, ರಾಜೇಶ ಗುಡ್ಡದಮನಿ, ಸಚಿನ್ ಚ್ಯಾಗಿ, ವೀರೇಶ ನೇಕಾರ, ಕೃಷ್ಣ ಪರಂಗಿ, ಗಿರೀಶ ಬಂಡರಗಲ್, ಚನ್ನಬಸವ ಗುಡ್ಡದಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.