ADVERTISEMENT

ದೇವದುರ್ಗ: ಮದ್ಯ ಮಾರಾಟ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:47 IST
Last Updated 16 ಅಕ್ಟೋಬರ್ 2025, 7:47 IST
<div class="paragraphs"><p>ದೇವದುರ್ಗ ಪಟ್ಟಣದ ಭಾಗ್ಯವಂತಿ ವೈನ್ಸ್ (ಸಿಎಲ್ 2) ಮದ್ಯದ ಅಂಗಡಿಗೆ ಮಾನ್ವಿ ಅಬಕಾರಿ ವೃತ್ತ ಪಿಎಸ್ಐ ವೀರಮ್ಮ ಮತ್ತು ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು&nbsp;</p></div>

ದೇವದುರ್ಗ ಪಟ್ಟಣದ ಭಾಗ್ಯವಂತಿ ವೈನ್ಸ್ (ಸಿಎಲ್ 2) ಮದ್ಯದ ಅಂಗಡಿಗೆ ಮಾನ್ವಿ ಅಬಕಾರಿ ವೃತ್ತ ಪಿಎಸ್ಐ ವೀರಮ್ಮ ಮತ್ತು ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು 

   

ದೇವದುರ್ಗ: ಅಬಕಾರಿ ಕಾಯ್ದೆ ಉಲ್ಲಂಘಿಸಿ ದುಬಾರಿ ಬೆಲೆಗೆ ಮಧ್ಯ ಮಾರಾಟ ಮಾಡಿದ್ದ ಪಟ್ಟಣದ ಮಂಜುನಾಥ ಬಾರ್ ಆಂಡ್ ರೆಸ್ಟೋರೆಂಟ್ ( ಸಿಎಲ್9), ಭಾಗ್ಯವಂತಿ ವೈನ್ ಶಾಪ್ (ಸಿಎಲ್ 2) ಮಾಲೀಕರ ವಿರುದ್ಧ ಅಬಕಾರಿ ಕಾಯ್ದೆ 1965 ಸೆಕ್ಷನ್ 36 ಡಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿಯಲ್ಲಿ ಅ.11ರಂದು ‘ಅಬಕಾರಿ ಕಾಯ್ದೆ ಉಲ್ಲಂಘಿಸಿ ಮದ್ಯ ಮಾರಾಟ: ಅಕ್ರಮದಲ್ಲಿ ಅಧಿಕಾರಿಗಳು ಶಾಮೀಕು– ಆರೋಪ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ADVERTISEMENT

ಅ.14 ರಂದು ಮಾನ್ವಿ ವೃತ್ತ ಅಬಕಾರಿ ಪಿಎಸ್ಐ ವಿರಮ್ಮ ಮತ್ತು ತಂಡ ಭಾಗ್ಯವಂತಿ ವೈನ್ಸ್ ಮತ್ತು ಮಂಜುನಾಥ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಬೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಕ್ರಮ ಎಸಗಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ ಎಂದು ಅಧಿಕಾರಿಗಳು ಪ್ರಥಮ ವರ್ತಮಾನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ವರದಿಗೆ ಮುಖ್ಯಮಂತ್ರಿ ಕಚೇರಿ ಸ್ಪಂದನೆ 

ಅಬಕಾರಿ ಕಾಯ್ದೆ ಉಲ್ಲಂಘಿಸಿ ಮಧ್ಯ ಮಾರಾಟ ಮಾಡಿದ ಮದ್ಯ ಮಾರಾಟ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಮುಖ್ಯಮಂತ್ರಿ ಕಚೇರಿಗೆ ಅನುಪಾಲನಾ ವರದಿ ನೀಡುವಂತೆ ಮುಖ್ಯಮಂತ್ರಿ ಕಚೇರಿ ವಿಶೇಷ ಕರ್ತವ್ಯ ಅಧಿಕಾರಿ ವೈಷ್ಣವಿ ಅವರು ಪತ್ರ ಬರೆದಿದ್ದಾರೆ. 

ದೇವದುರ್ಗ ಪಟ್ಟಣದ ಮಂಜುನಾಥ ಬಾರ್ ಅಂಡ್ ರೆಸ್ಟೋರೆಂಟ್ (ಸಿಎಲ್ 9) ಮದ್ಯದ ಅಂಗಡಿಗೆ ಮಾನವಿ ಅಬಕಾರಿ ವೃತ್ತ ಪಿಎಸ್ಐ ವೀರಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾನವಿ ಅಬಕಾರಿ ವೃತ್ತ ನಿರೀಕ್ಷಕ ಯಮನೂರ್ ಸಾಬ್ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಗೆ ನೀಡಿದ ಅನುಪಾಲನ ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.