ADVERTISEMENT

ಮಂತ್ರಾಲಯ: ಮೃತ್ತಿಕಾ ಸಂಗ್ರಹಣಾ ಪೂಜೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:18 IST
Last Updated 25 ಜುಲೈ 2021, 3:18 IST
ಮಂತ್ರಾಲಯದಲ್ಲಿ ತುಂಗಭದ್ರಾ ನದಿ ಪಕ್ಕದ ತುಳಸಿವನದಿಂದ ಶನಿವಾರ ಮೃತ್ತಿಕಾ ಸಂಗ್ರಹ ಕಾರ್ಯ ನಡೆಯಿತು
ಮಂತ್ರಾಲಯದಲ್ಲಿ ತುಂಗಭದ್ರಾ ನದಿ ಪಕ್ಕದ ತುಳಸಿವನದಿಂದ ಶನಿವಾರ ಮೃತ್ತಿಕಾ ಸಂಗ್ರಹ ಕಾರ್ಯ ನಡೆಯಿತು   

ರಾಯಚೂರು: ಆಷಾಢ ಶುದ್ಧ ಪೂರ್ಣಿಮೆ ದಿನವಾದ ಶನಿವಾರ ಮಂತ್ರಾಲಯದಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮೃತ್ತಿಕಾ ಸಂಗ್ರಹಣಾ ವಿಧಿ–ವಿಧಾನಗಳನ್ನು ನೆರವೇರಿಸಿದರು.

ತುಂಗಭದ್ರಾ ನದಿ ಪಕ್ಕದಲ್ಲಿರುವ ತುಳಸಿ ವನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಶ್ರೀಗಳು, ತುಳಸಿಗಿಡದ ಕೆಳಗಿನ ಮೃತ್ತಿಕೆಯನ್ನು ಬೆಳ್ಳಿ ಪಾತ್ರೆಯಲ್ಲಿ ಸಂಗ್ರಹಿಸುವ ಕಾರ್ಯನೆರವೇರಿಸಿದರು.

ತುಳಸಿ ವನದಿಂದ ಮಠದವರೆಗೂ ಸುವರ್ಣ ಪಲ್ಲಕ್ಕಿಯಲ್ಲಿ ಮೃತ್ತಿಕೆಯನ್ನು ಮೆರವಣಿಗೆ ಮೂಲಕ ತರಲಾಯಿತು. ‌ಬಳಿಕ ಧಾರ್ಮಿಕ‌ ನಿಯಮಾನುಸಾರ ಮೃತ್ತಿಕೆಯನ್ನು ರಾಯರ ಮೂಲ ವೃಂದಾವನದ ಮೇಲೆ ಇರಿಸಲಾಯಿತು.

ADVERTISEMENT

ಮಠದ ಸಿಬ್ಬಂದಿ ಹಾಗೂ ಭಕ್ತರು ಮೆರವಣಿಗೆಯಲ್ಲಿ ‌ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.