ADVERTISEMENT

ನೆರವಿಗೆ ಬರಲು ಜಿಲ್ಲಾಡಳಿತ ಮನವಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 15:07 IST
Last Updated 29 ಮಾರ್ಚ್ 2020, 15:07 IST

ರಾಯಚೂರು: ಕೊರೊನಾ ಸೋಂಕು ಹರಡದಂತೆ ಯಾವುದೇ ಕಾರಣಕ್ಕೂ ಜಿಲ್ಲೆಗಳ ಗಡಿಗಳನ್ನು ದಾಟಿ ಹೋಗದಂತೆ ಕ್ರಮವಹಿಸಿದ್ದು ಅನ್ಯ ಜಿಲ್ಲೆ, ರಾಜ್ಯದ ಜನರಿಗೆ ಊಟ, ವಸತಿ, ಬಟ್ಟೆ ಇತ್ಯಾದಿ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಜೊತೆ ಕೈ ಜೋಡಿಸಿ ನೆರವಿಗೆ ಬರಲು ಮನವಿ ಮಾಡಿದೆ.

ಜಿಲ್ಲೆಯ ಗಡಿ ಪ್ರವೇಶಿಸಿರುವ ಜನರಿಗೆ ಊಟ, ವಸತಿ, ಬಟ್ಟೆ ಇತ್ಯಾದಿ ಮೂಲಸೌಕರ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ಸಾರ್ವಜನಿಕರು ಈ ತುರ್ತು ಸಂದರ್ಭದಲ್ಲಿ ಜನರ ನೆರವಿಗೆ ಬರುವಂತೆ ಜಿಲ್ಲಾಡಳಿತ ಕೋರಿದೆ.

ನೆರವಿಗಾಗಿ ರಾಯಚೂರು ನಗರಕ್ಕೆ ಸಂಬಂಧಿಸಿದಂತೆ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್ 9448147390, ಲಿಂಗಸುಗೂರು ತಹಶೀಲ್ದಾರ್‌ 8861308444, ಮಾನ್ವಿ ತಹಸಿಲ್ದಾರ್‌ 9886651314, ರಾಯಚೂರು ತಹಶೀಲ್ದಾರ್‌ 8722014680, ಸಿರವಾರ ತಹಶೀಲ್ದಾರ್‌ 9686577599, ಮಸ್ಕಿ ತಹಶೀಲ್ದಾರ್‌ 9538284426, ಸಿಂಧನೂರು ತಹಶೀಲ್ದಾರ್‌ 9483483100, ದೇವದುರ್ಗ ತಹಶೀಲ್ದಾರ್‌ 9916681192 ಮೊಬೈಲ್‌ಗೆ ಸಂಪರ್ಕಿಸಬಹುದು.

ADVERTISEMENT

ತುರ್ತು ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಬಗ್ಗೆ ವಿವರದೊಂದಿಗೆ ನೋಂದಣಿ ಮಾಡಿಕೊಳ್ಳಲು ಜಿಲ್ಲಾಡಳಿತ ಕೋರಿದೆ. ಜಿಲ್ಲಾಡಳಿತದ ಅಗತ್ಯಕ್ಕೆ ತಕ್ಕಂತೆ ಸೇವೆಯನ್ನು ಪಡೆದು, ನೇರವಾಗಿ ಸಂತ್ರಸ್ತರಿಗೆ ನೆರವು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.