ರಾಯಚೂರು: ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸುರೇಂದ್ರಬಾಬು ತಿಳಿಸಿದ್ದಾರೆ.
ಪಟಾಕಿಗಳಿಗೆ ಬೆಂಕಿ ಹಚ್ಚುವಾಗ ಅವುಗಳ ಕಡೆ ಮುಖ ಮಾಡಿ ಅದರಿಂದ ದೂರ ಸೆರೆದು ಬೆಂಕಿ ಹಚ್ಚಬೇಕು, ಪಟಾಕಿಗೆ ಬೆಂಕಿ ಹಚ್ಚಿದ ಬಳಕೆ ಅದನ್ನು ಕೈಯಲ್ಲಿ ಮುಟ್ಟಬಾರದು, ಕೈಯಲ್ಲಿ ಹಿಡಿದು ಬೇರೆ ಕಡೆ ಕೊಂಡೊಯ್ಯಬಾರದು, ಸಡಿಲವಾದ ಅಥವಾ ನೈಲಾನ್ ಬಟ್ಟೆಗಳನ್ನು ಧರಿಸಬಾರದು, ಮೇಣದಬತ್ತಿ ಅಥವಾ ಲೈಟರ್‌ಗಳನ್ನು ಬಳಸಿ ಪಟಾಕಿ ಸುಡಬಾರದು, ಉದ್ದನೇ ಸುರುಸುರು ಬತ್ತಿಯಿಂದ ಪಟಾಕಿಗೆ ಬೆಂಕಿ ಹಚ್ಚಿ ತಕ್ಷಣವೇ ದೂರ ಸರಿಯಬೇಕು ಎಂದು ಸಲಹೆ ನೀಡಿದ್ದಾರೆ.
ಕಣ್ಣುಗಳನ್ನು ಹೊಗೆ ಮತ್ತು ಬೆಂಕಿಯಿಂದ ರಕ್ಷಿಸಲು ಪಟಾಕಿ ಸಿಡಿಸುವಾಗ ಕನ್ನಡಕವನ್ನು ಧರಿಸಬೇಕು. ನೀರಿನ ಬಕೆಟ್ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಪಕ್ಕದಲ್ಲಿ ಇಟ್ಟುಕೊಳ್ಖಬೇಕು. ತೆರೆದ ಜಾಗದಲ್ಲಿ ಮಾತ್ರ ಪಟಾಕಿ ಸಿಡಿಸಬೇಕು. ಮನೆ ಅಂಗಳ ಉತ್ತಮ ಮನೆಯ ಒಳಗೆ ಪಟಾಕಿಗೆ ಬೆಂಕಿ ಹಚ್ಚಬಾರದು. ಪಟಾಕಿ ಸಿಡಿಸುವಾಗ ಪಾದರಕ್ಷಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಿದ್ದಾರೆ.
ತುರ್ತು ಸಂಪರ್ಕಕ್ಕೆ ವ್ಯವಸ್ಥೆ: ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪಟಾಕಿಗಳು ಹೊಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರದ ಸೂಚನೆಯಂತೆ ಹಸಿರು ಪಟಾಕಿಗಳನ್ನು ಸಿಡಿಸುವುದರಿಂದ ಪರಿಸರ ನೈರ್ಮಲ್ಯ ಕಾಪಾಡಬಹುದು. ಬೇರೆ ಪಟಾಕಿ ಹೆಚ್ಚಿನ ಮದ್ದು ಉಳ್ಳ ಪಟಾಕಿಗಳನ್ನು ಸಿಡಿಸುವಾಗ ಕಣ್ಣಿಗೆ ತೊಂದರೆ ಮತ್ತು ಏನಾದರೂ ಅವಗಡಗಳು ಸಂಭವಿಸಿದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಹೋಗಬೇಕು ಮತ್ತು ಅಲ್ಲಿ ಎಲ್ಲ ತಜ್ಞರು ಲಭ್ಯವಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಆಯಾ ಕಡೆಗಿನ ವೈದ್ಯರು ಮತ್ತು ವೈದ್ಯಾಧಿಕಾರಿಗಳಿಗೆ ಸಂಪರ್ಕಿಸಬಹುದು ಎಂದು ಡಿಎಚ್‌ಒ ತಿಳಿಸಿದ್ದಾರೆ.
ಅಧಿಕಾರಿಗಳ ವಿವರ: ರಾಯಚೂರು ತಾಲ್ಲೂಕಿಗೆ ಸಂಬಂಧಿಸಿದಂತೆ ರಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸೂರ್ಯಕಾಂತ ಮಂಡೋಲಕರ್ ಮೊ.9448179303 ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಫರಾನಾ ಮೊ.9686590067 ಅವರಿಗೆ ಸಂಪರ್ಕಿಸಬಹುದಾಗಿದೆ.
ಮಾನ್ವಿ: ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಶರಣಬಸವರಾಜ ಮೊ.7019496475 ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅರವಿಂದ ಮೊ.9591155480 ಸಂಪರ್ಕಿಸಬಹುದಾಗಿದೆ.
ಸಿಂಧನೂರು: ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಅಯ್ಯನಗೌಡ ಮೊ.7259403400 ಅಥವಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಶಗೌಡ ಮೊ.9448034170 ಅವರಿಗೆ ಸಂಪರ್ಕಿಸಬಹುದು.
ಲಿಂಗಸುಗೂರು: ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಅಮರೇಶ ಪಾಟೀಲ ಮೊ.9902848859 ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಮೊ.9986515047 ಅವರಿಗೆ ಸಂಪರ್ಕಿಸಬೇಕು.
ದೇವದುರ್ಗ: ತಾಲ್ಲೂಕು ಆರೋಗ್ಯ ಅಧಿಕಾರಿ ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಂದೇಶ್ವರ ಮೊ.9343690209ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.