ಪ್ರಜಾವಾಣಿ ವಾರ್ತೆ
ಕವಿತಾಳ: ಪಟ್ಟಣದ 11 ಮತ್ತು 14ನೇ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ವಾರ್ಡ್ ನಿವಾಸಿಗಳು ಸೋಮವಾರ ಪಟ್ಟಣ ಪಂಚಾಯಿತಿಗೆ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಅಮೃತ 2.0 ಯೋಜನೆಯಡಿ ಹೊಸದಾಗಿ ಮೇಲ್ತೊಟ್ಟಿ ನಿರ್ಮಿಸುವ ಉದ್ದೇಶದಿಂದ ಹಳೆ ಪೈಪ್ ಬದಲಿಸಿ, ಚಿಕ್ಕಗಾತ್ರದ ಪೈಪ್ ಅಳವಡಿಸಲಾಗಿದೆ. ಹೀಗಾಗಿ ಒಂದು ವಾರದಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಕರಿಯಪ್ಪ ಯಾದವ, ಸದ್ದಾಂಹುಸೇನ್, ತಿಮ್ಮಣ್ಣ ಯಾದವ, ಅನೂಪ್ ಸಿಂಗ್, ಶಿವಪ್ಪ, ವೆಂಕಟೇಶ, ಯಂಕಮ್ಮ, ಮುದ್ದಮ್ಮ ಮತ್ತು ಪದ್ದಮ್ಮ ಆರೋಪಿಸಿದರು.
ಸಮಸ್ಯೆ ಆಲಿಸಿದ ಮುಖ್ಯಾಧಿಕಾರಿ ಜಸ್‌ಪಾಲ್ ಸಿಂಗ್, ಎಂಜಿನಿಯರ್ ಜಯಣ್ಣ ಅವರು ವಾರ್ಡ್‌ಗೆ ಭೇಟಿ ಪರಿಶೀಲಿಸಿ, ಹಳೆಪೈಪ್ ಜೋಡಣೆ ಮಾಡಿ, ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.